ಪ್ರಧಾನಿ ಮೋದಿ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ತೀವ್ರ ಕುಸಿತ!
ನವದೆಹಲಿ: ಮೈಕ್ರೋ-ಬ್ಲಾಗಿಂಗ್ ಸೈಟ್ ಹಲವಾರು ಸಂಶಯಾಸ್ಪದ ಮತ್ತು ನಿಷ್ಕ್ರಿಯ ಖಾತೆಗಳನ್ನು ಡಿಲಿಟ್ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರದಂದು ಟ್ವಿಟರ್ ಫಾಲೋವರ್ ಸಂಖ್ಯೆಯಲ್ಲಿ ಕಡಿತವಾಗಿದೆ.
socialblade.com ವೆಬ್ ಸೈಟ್ ಪ್ರಕಾರ ಪ್ರಧಾನ ಮಂತ್ರಿ ಮೋದಿ 2,84,746 ಫಾಲೋವರ್ ಗಳನ್ನು ಕಳೆದುಕೊಂಡಿದ್ದಾರೆ.ಸದ್ಯ ಅವರು ಟ್ವಿಟ್ಟರ್ ನಲ್ಲಿ 43.1 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಇನ್ನೊಂದೆಡೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 17,503 ಫಾಲೋವರ್ ಕಳೆದುಕೊಂದಿದ್ದಾರೆ. ಪ್ರಸ್ತುತ ಅವರು ಟ್ವಿಟರ್ನಲ್ಲಿ 7.33 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ.
ಫಾಲೋವರ್ ಕಳೆದುಕೊಂಡ ಇತರ ರಾಜಕಾರಣಿಗಳು ಕೆಳಕಂಡಂತಿವೆ:
ಸುಷ್ಮಾ ಸ್ವರಾಜ್ - 74,132
ಶಶಿ ತರೂರ್ - 1, 51,509
ಡೆರೆಕ್ ಒ 'ಬ್ರಿಯಾನ್ - 10,902
ಸ್ಮೃತಿ ಇರಾನಿ- 41,280
ಮೈಕ್ರೋ-ಬ್ಲಾಗಿಂಗ್ ಸೈಟ್ "ಲಾಕ್ಡ್ ಅಕೌಂಟ್ಸ್" ಅನ್ನು ತೆಗೆದುಹಾಕಿರುವುದರಿಂದ ಪ್ರಪಂಚದಾದ್ಯಂತದ ಟ್ವಿಟರ್ ಅನುಯಾಯಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.
News Source:ANI