ಕಾಲೇಜು ಆವರಣದಲ್ಲಿ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡದ ಪ್ರಿನ್ಸಿಪಾಲ್ಗೆ ಕಪಾಳಮೋಕ್ಷ
ಹುಟ್ಟುಹಬ್ಬ ಆಚರಿಸಲು ಅವಕಾಶ ನೀಡದ ಕಾರಣ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರಿಗೇ ಕಪಾಳಮೋಕ್ಷ ಮಾಡಿ, ಬೆದರಿಕೆ ಹಾಕಿದ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿರುವ ದಯಾನಂದ ಕಾಲೇಜಿನಲ್ಲಿ ನಡೆದಿದೆ.
ಅಜ್ಮೀರ್: ಕಾಲೇಜು ಆವರಣದಲ್ಲಿ ಹುಟ್ಟುಹಬ್ಬ ಆಚರಿಸಲು ಅವಕಾಶ ನೀಡದ ಕಾರಣ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರಿಗೇ ಕಪಾಳಮೋಕ್ಷ ಮಾಡಿ, ಬೆದರಿಕೆ ಹಾಕಿದ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿರುವ ದಯಾನಂದ ಕಾಲೇಜಿನಲ್ಲಿ ನಡೆದಿದೆ.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೀತಾರಾಂ ಚೌಧರಿ ತನ್ನ ಹುಟ್ಟುಹಬ್ಬವನ್ನು ಕಾಲೇಜು ಆವರಣದಲ್ಲಿ ಆಚರಿಸಿಕೊಳ್ಳುತ್ತಿದ್ದುದನ್ನು ಕಂಡ ಪ್ರಾಂಶುಪಾಲರು ಇದಕ್ಕೆ ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಆದರೆ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೀತಾರಾಂ ಮತ್ತು ಪ್ರಾಂಶುಪಾಲರ ನಡುವೆ ಮಾತುಕತೆ ನಡೆದು, ಪರಿಸ್ಥಿತಿ ಕೈಮಿರಿದಾಗ ಸೀತಾರಾಂ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೂರುಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಸ್ಟೇಷನ್ ಹೌಸ್ ಅಧಿಕಾರಿ ತಿಳಿಸಿದ್ದಾರೆ.
"ಕೆಲವು ವಿದ್ಯಾರ್ಥಿಗಳು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ ಮತ್ತು ಕೇಕ್ ಕತ್ತರಿಸುತ್ತಿದ್ದಾರೆ ಎಂದು ಇತರ ವಿದ್ಯಾರ್ಥಿಗಳು ನನಗೆ ಮಾಹಿತಿ ನೀಡಿದ ಬಳಿಕ ಪರಿಶೀಲನೆಗೆ ಅಲ್ಲಿಗೆ ತೆರಳಿದೆ. ನಮ್ಮ ಕ್ಯಾಂಪಸ್ ನಲ್ಲಿ ಇಂತಹ ಆಚರಣೆಗೆ ಅನುಮತಿಯಿಲ್ಲ. ವಿದ್ಯಾರ್ಥಿಗಳು ಬೇಕಿದ್ದರೆ ಖಾಸಗಿ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದು, ಆದರೆ ಕಾಲೇಜು ಆವರಣದಲ್ಲಿ ಅಲ್ಲ. ನಾನು ಆ ಸ್ಥಳಕ್ಕೆ ಹೋದಾಗ ಸೀತಾರಾಂ ಜೊತೆ 40 ವಿದ್ಯಾರ್ಥಿಗಳಿದ್ದರು. ಆಚರಣೆಗೆ ಅಡ್ಡಿ ಪಡಿಸಿದ್ದಕ್ಕೆ ನನ್ನ ಕೆನ್ನೆಗೇ ಹೊಡೆದು ಬೆದರಿಕೆ ಹಾಕಿದ" ಎಂದು ಪ್ರಾಂಶುಪಾಲರು ಎಎನ್‌ಐಗೆ ತಿಳಿಸಿದ್ದಾರೆ.