Indian Space Policy 2023: ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಅವರು ಈ ಕುರಿತು ಮಾಹಿತಿ ನೀಡಿ, ಇನ್ನು ಖಾಸಗಿ ವಲಯದ ಸಂಸ್ಥೆಗಳಿಗೆ ರಾಕೆಟ್‌ಗಳು, ಉಡಾವಣಾ ವಾಹನಗಳು, ಉಪಗ್ರಹಗಳನ್ನು ಅಭಿವೃದ್ಧಿ ಪಡಿಸುವ, ಮಾಹಿತಿಗಳನ್ನು ಸಂಗ್ರಹಿಸುವ ಹಾಗೂ ವಿನಿಮಯ ಮಾಡುವ ಸಾಮರ್ಥ್ಯ ಲಭಿಸಲಿದೆ ಎಂದಿದ್ದಾರೆ. ಖಾಸಗಿ ವಲಯಕ್ಕೆ ಎಲ್ಲಾ ರೀತಿಯ ಬಾಹ್ಯಾಕಾಶ ಚಟುವಟಿಕೆಗಳಿಗೆ ಅನುಮತಿ ಲಭಿಸುತ್ತದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ಸರ್ಕಾರ ಇತ್ತೀಚೆಗೆ ತನ್ನ ನೂತನ ಭಾರತೀಯ ಬಾಹ್ಯಾಕಾಶ ನೀತಿಗೆ ಅನುಮೋದನೆ ನೀಡಿದೆ. ಈ ನೀತಿಯ ಪ್ರಮುಖ ಗುರಿಯೆಂದರೆ, ದೇಶದ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ವಲಯದ ಪಾಲುದಾರಿಕೆಯನ್ನು ಉತ್ತೇಜಿಸುವುದು. ಈ ನೀತಿ ಬಾಹ್ಯಾಕಾಶ ವಲಯದಲ್ಲಿ ಭಾರತೀಯ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಸುಲಭವಾಗಿಸುವ ಉದ್ದೇಶ ಹೊಂದಿದೆ.


ಈ ನೂತನ ನೀತಿಯ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಗಮನ ಕೇಂದ್ರೀಕರಿಸಲಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ನೂತನ ಭಾರತೀಯ ಬಾಹ್ಯಾಕಾಶ ನೀತಿ ಬಾಹ್ಯಾಕಾಶ ಚಟುವಟಿಕೆಗಳ ಕುರಿತು ಸ್ಪಷ್ಟ ಮಾಹಿತಿ ಒದಗಿಸಲಿದೆ ಎಂದಿದ್ದಾರೆ. ಈ ನೀತಿ ಭಾರತದ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಬಲ್ಲದು.


ನೂತನ ಬಾಹ್ಯಾಕಾಶ ನೀತಿ ಖಾಸಗಿ ವಲಯಕ್ಕೆ ರಾಕೆಟ್, ಉಪಗ್ರಹಗಳು, ಉಡಾವಣಾ ವಾಹನಗಳನ್ನು ನಿರ್ಮಿಸಲು, ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ವಿನಿಮಯಗೊಳಿಸಲು ಅನುಮತಿ ನೀಡುತ್ತದೆ. 


ಎನ್ಎಸ್ಐಎಲ್: ಸಾರ್ವಜನಿಕ ವಲಯದ ಸಂಸ್ಥೆಯಾದ ಎನ್ಎಸ್ಐಎಲ್ ಬಾಹ್ಯಾಕಾಶ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತದೆ. ಈ ಸಂಸ್ಥೆ ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಚಟುವಟಿಕೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತದೆ. ಎನ್ಎಸ್ಐಎಲ್ ಬೇಡಿಕೆಗಳಿಗೆ ತಕ್ಕ ಹಾಗೆ ಕಾರ್ಯಾಚರಿಸಿ, ಗುರಿ ಸಾಧಿಸಲು ನೆರವಾಗುತ್ತದೆ.


ಇದನ್ನೂ ಓದಿ : 2006 ರಲ್ಲಿ 1,411 ಇದ್ದ ಹುಲಿಗಳ ಸಂಖ್ಯೆ ಈಗ ಎಷ್ಟಿದೆ ಗೊತ್ತಾ?


ಇಸ್ರೋ ಅಧ್ಯಕ್ಷರಾದ ಸೋಮನಾಥ್ ಅವರ ಪ್ರಕಾರ, ಬಾಹ್ಯಾಕಾಶ ನೀತಿ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಿದೆ ಎಂದಿದ್ದಾರೆ. 


ಇನ್ ಸ್ಪೇಸ್: ಸೋಮನಾಥ್ ಅವರು ಈ ನೂತನವಾಗಿ ಸ್ಥಾಪಿಸಿರುವ ಸಂಸ್ಥೆ ಇಸ್ರೋ ಹಾಗೂ ಇತರ ಖಾಸಗಿ ಸಂಸ್ಥೆಗಳ ಸಂಪರ್ಕ ತಂತುವಾಗಿ ಕಾರ್ಯ ನಿರ್ವಹಿಸುತ್ತದೆ.


ಭಾರತೀಯ ಬಾಹ್ಯಾಕಾಶ ನೀತಿ 2023: ಮಾಹಿತಿಗಳು


ನೂತನ ಬಾಹ್ಯಾಕಾಶ ನೀತಿ ಖಾಸಗಿ ಸಂಸ್ಥೆಗಳಿಗೆ ಇಸ್ರೋದ ವ್ಯವಸ್ಥೆಗಳನ್ನು ಕನಿಷ್ಠ ಬೆಲೆ ಪಾವತಿಸಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆ ಹಣವನ್ನು ಇಸ್ರೋ ಈ ವಲಯಕ್ಕೆ ನೂತನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಳಸಿಕೊಳ್ಳುತ್ತದೆ.


ಸೋಮನಾಥ್ ಅವರ ಪ್ರಕಾರ, ಖಾಸಗಿ ಸಂಸ್ಥೆಗಳ ಕಾರ್ಯಾಚರಣೆ ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿ, ಯೋಜನೆಗಳಲ್ಲಿ ಇಸ್ರೋ ನೇರವಾಗಿ ಭಾಗಿಯಾಗುವುದಿಲ್ಲ. ಅದರ ಬದಲು ಇಸ್ರೋ ನೂತನ ತಂತ್ರಜ್ಞಾನಗಳು, ಸಿಸ್ಟಮ್‌ಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತದೆ.


ಇಸ್ರೋದ ಕಾರ್ಯ ಯೋಜನೆಗಳನ್ನು ಬಾಹ್ಯಾಕಾಶ ಇಲಾಖೆಯಡಿ ಕಾರ್ಯಾಚರಿಸುವ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ನ್ಯೂ ಸ್ಪೇಸ್ ಇಂಡಿಯಾಗೆ ವರ್ಗಾಯಿಸಲಾಗುತ್ತದೆ. ಇಸ್ರೋದ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಕಾರ್ಯಗಳನ್ನು ಈ ಸಂಸ್ಥೆ ನಿರ್ವಹಿಸಲಿದೆ.


ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಬಾಹ್ಯಾಕಾಶ ಆರ್ಥಿಕತೆಗೆ ಹೇಗೆ ನೆರವಾಗಲಿದೆ?


ಇಸ್ರೋ ಅಧ್ಯಕ್ಷರಾದ ಸೋಮನಾಥ್ ಅವರು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲು ಪ್ರಸ್ತುತ 2%ಕ್ಕೂ ಕಡಿಮೆಯಿದ್ದು, ನೂತನ ನೀತಿ ಭವಿಷ್ಯದಲ್ಲಿ ಇದನ್ನು 10%ಕ್ಕೆ ಹೆಚ್ಚಿಸಲಿದೆ.


ಇದನ್ನೂ ಓದಿ : ದೆಹಲಿಯ ಸೇಕ್ರೆಡ್ ಹಾರ್ಟ್ ಚರ್ಚ್ ತಲುಪಿದ ಪ್ರಧಾನಿ ಮೋದಿ, ಪ್ರಾರ್ಥನೆಯಲ್ಲೂ ಭಾಗಿ


ಕೇಂದ್ರ ಸಚಿವಾಲಯ ಭಾರತೀಯ ಬಾಹ್ಯಾಕಾಶ ನೀತಿ - 2023ಕ್ಕೆ ಅನುಮತಿ ನೀಡಿರುವುದು ಒಂದು ಪ್ರಮುಖ ಕ್ರಮವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ (ನಿವೃತ್ತ), ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ಮಹಾನಿರ್ದೇಶಕರಾದ ಎ ಕೆ ಭಟ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ಈ ನೂತನ ನೀತಿ ಬಾಹ್ಯಾಕಾಶ ಸುಧಾರಣೆಗಳ ಕುರಿತು ಸ್ಪಷ್ಟನೆ ನೀಡಿ, ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿ, ಅಂತಿಮವಾಗಿ ಭಾರತದ ಬಾಹ್ಯಾಕಾಶ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದಿದ್ದಾರೆ.


ಭಾರತದ ಬಾಹ್ಯಾಕಾಶ ಆರ್ಥಿಕತೆಯ ಭವಿಷ್ಯ


ವೈಸ್ ವರದಿಯ ಪ್ರಕಾರ, ಬಾಹ್ಯಾಕಾಶ ಉದ್ಯಮದ ನಿವ್ವಳ ಮೌಲ್ಯ 500 ಬಿಲಿಯನ್ ಡಾಲರ್‌ಗೂ ಹೆಚ್ಚಾಗಿದ್ದು, ಅತಿಹೆಚ್ಚು ಖರ್ಚು ಅಮೆರಿಕಾ ಮತ್ತು ಚೀನಾಗಳು ನಡೆಸುತ್ತಿವೆ. ಬಾಹ್ಯಾಕಾಶ ಉದ್ಯಮಕ್ಕೆ ಭಾರತದ ಕೊಡುಗೆ ಕೇವಲ 2% ಆಗಿದೆ.


ಎಕನಾಮಿಕ್ ಸರ್ವೇ ಆಫ್ ಇಂಡಿಯಾ ಪ್ರಕಾರ, 2012ರ ಬಳಿಕ ನೂರಕ್ಕೂ ಹೆಚ್ಚು ಬಾಹ್ಯಾಕಾಶ ಸಂಸ್ಥೆಗಳು ಸಕ್ರಿಯವಾಗಿವೆ. ಈ ಸಂಸ್ಥೆಗಳು ಇತ್ತೀಚೆಗೆ ಸ್ಥಾಪಿಸಿರುವ ಇನ್ ಸ್ಪೇಸ್ ಸಂಸ್ಥೆಯ ಒಪ್ಪಿಗೆಗೆ ಕಾಯುತ್ತಿವೆ. ಇನ್ ಸ್ಪೇಸ್ ಇಸ್ರೋ ಮತ್ತು ಖಾಸಗಿ ಉದ್ಯಮಗಳ ನಡುವಿನ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ.


ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶ ಮಾಡಿಕೊಡುವುದು ಲಾಭದಾಯಕ ಎನ್ನುವುದು ಈಗಾಗಲೇ ಅಮೆರಿಕಾದಂತಹ ದೇಶಗಳಲ್ಲಿ ಸಾಬೀತಾಗಿದೆ. ಅಂತಹ ಒಂದು ಖಾಸಗಿ ಸಂಸ್ಥೆಗೆ ಉದಾಹರಣೆ ಎಂದರೆ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ. ಅದರ ಫಾಲ್ಕನ್ 9 ರಾಕೆಟ್‌ಗಳು ಹಲವು ಬಾರಿ ಮರುಬಳಕೆ ಮಾಡಬಲ್ಲವಾಗಿದ್ದು, ಜಾಗತಿಕವಾಗಿ ಬಾಹ್ಯಾಕಾಶ ಯೋಜನೆಗಳಲ್ಲಿ ಜನಪ್ರಿಯತೆ ಗಳಿಸುತ್ತಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.