ಬೆಂಗಳೂರು: ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಧೃಡಪಟ್ಟಿದೆ.ಈ ವಿಷಯವನ್ನು ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳ ವೇದಿಕೆ ಮೂಲಕ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Ind vs SA : 'ಕ್ರಿಕೆಟ್‌ನಿಂದ ಅಮಾನತು ಮಾಡಿ ದಂಡ ವಿಧಿಸಿ' : ಕೊಹ್ಲಿ ವಿರುದ್ಧ ವಾಗ್ದಾಳಿ!


"ಕೋವಿಡ್ ನ ಸೌಮ್ಯ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಟೆಸ್ಟ್ ಮಾಡಿಸಿದಾಗ ನನ್ನ ವರದಿ ಕೋವಿಡ್ ಪಾಸಿಟಿವ್ ಎಂದು ಬಂದಿದೆ.ಆದರೆ ಅದೃಷ್ಟವಶಾತ್ ನನ್ನ ಎಲ್ಲಾ ಸಿಬ್ಬಂದಿಗಳಿಗೆ ಪರೀಕ್ಷೆಯಲ್ಲಿ ನೆಗೆಟೀವ್ ಎಂದು ವರದಿ ಬಂದಿದೆ.ನನ್ನೊಂದಿಗೆ ಸಂಪರ್ಕದಲ್ಲಿದ್ದ ಯಾರಾದರೂ ಕೊರೋನಾ ಪರೀಕ್ಷೆ ಮಾಡಿಸಿ ಎಚ್ಚರವಾಗಿರಲು ವಿನಂತಿಸಿಕೊಳ್ಳುತ್ತೇನೆ.ಎಲ್ಲರ ಕರೆಗಳನ್ನ ಸ್ವೀಕಾರ ಮಾಡಲು ಈಗ ನನ್ನಿಂದ ಸಾಧ್ಯವಾಗುತ್ತಿಲ್ಲ, ಆದ್ದರಿಂದ ತಾಲೂಕಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಹಾಗೂ ಸಲಹೆಯಿದ್ದಲ್ಲಿ ಎಂದಿನಂತೆ ನನ್ನನ್ನು ಎಸ್ ಎಮ್ ಎಸ್ ಮೂಲಕ ಅಥವಾ ನನ್ನ ಆಪ್ತ ಸಹಾಯಕ ಸಿಬ್ಬಂದಿಯನ್ನ ಸಂಪರ್ಕಿಸಬಹುದಾಗಿದೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Big News: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ, ಧಗಧಗಿಸಿ ಹೊತ್ತಿ ಉರಿದ ಶಾಂಪಿಂಗ್ ಮಾಲ್!


ದೇಶದಲ್ಲೆಡೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲಿ ಈಗಾಗಲೇ ವಿಕೆಂಡ್ ಕರ್ಪ್ಯೂ ಹಾಗೂ ಇನ್ನಿತರ ನಿರ್ಬಂಧಗಳನ್ನು ವಿಧಿಸಲಾಗಿದೆ.ತಜ್ಞರು ಈಗಾಗಲೇ ಓಮಿಕ್ರಾನ್ ರೂಪಾಂತರ ವೈರಸ್ ನ್ನು ಲಘುವಾಗಿ ಪರಿಗಣಿಸಬೇಡಿ ಲಸಿಕೆ ಹಾಕಿಸಿಕೊಳ್ಳುವುದನ್ನು ಹಾಗೂ ಕೊರೊನಾ ಪ್ರೋಟೋಕಾಲ್ ಗಳನ್ನು ಪಾಲಿಸುವುದನ್ನು ಮುಂದುವರೆಸಿರಿ ಎಂದು ಸಲಹೆ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.