ನವದೆಹಲಿ: ಅಮೇಥಿಯಲ್ಲಿ  ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಲ್ಲಿಸಿದ ಚುನಾವಣಾ ನಾಮಪತ್ರದಲ್ಲಿ ತಾವು ಪದವಿಯನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಘೋಷಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಇದಕ್ಕೆ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರನ್ನು ಭಿನ್ನವಾಗಿ ವ್ಯಂಗ್ಯವಾಡಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು "ಹೊಸ ಧಾರಾವಾಹಿ ಬರಲಿದೆ, 'ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜುಯೇಟ್ ಥಿ'; ಅದರ ಆರಂಭಿಕ ಸಾಲು 'ಕ್ವಾಲಿಫಿಕೇಶನ್  ಕೆ ಭಿ ರೂಪ್ ಬದಲ್ತೆ ಹೈ, ನಯೆ-ನಯೇ ಸಾಂಚೆ ಮೈ ಧಲ್ತೆ ಹೈ, ಇಕ್ ಡಿಗ್ರಿ ಆತಿ ಹೈ, ಏಕ್ ಡಿಗ್ರಿ ಜಾತಿ ಹೈ, ಬನತೆ ಅಫಿಡವಿಟ್ ನಯೇ ಹೈ."ಎಂದು ಹಾಡಿ ಸ್ಮೃತಿ ಇರಾನಿಯವರನ್ನು ಕಾಲೆಳೆದಿದ್ದಾರೆ. 



ಸ್ಮೃತಿ ಇರಾನಿ ನಿನ್ನೆ ನಾಮಪತ್ರ ಸಲ್ಲಿಸಿ 1993 ರಲ್ಲಿ ತಮ್ಮ ಸಿನಿಯರ್ ಸೆಕೆಂಡರಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು, ಆದರೆ 1994 ರಲ್ಲಿ ಪದವಿಯನ್ನು ಅರ್ಧಕ್ಕೆ  ಬಿಟ್ಟಿರುವುದಾಗಿ ಹೇಳಿದರು. 2014 ರ ಚುನಾವಣೆಯಲ್ಲಿ ಅವರು ತಮ್ಮ ಅಫಿದಾವಿತ್ ನಲ್ಲಿ  ದೆಹಲಿ ಯೂನಿವರ್ಸಿಟಿಯ ಸ್ಕೂಲ್ ಆಫ್ ಓಪನ್ ಲರ್ನಿಂಗ್ 1994 ರಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದರು.