ನವದೆಹಲಿ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ನೀರವ್ ಮೋದಿ ಅವರ ಆಭರಣ ಉತ್ಪನ್ನದ ಬ್ರಾಂಡ್ ಅಂಬಾಸಿಡರ್ ನಿಂದ  ಹೊರ ಬಂದಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನೀರವ್ ಮೋದಿ ಯವರು 11,300 ಕೋಟಿ ರೂಗಳ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಈಗ ಅದನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಮರುಪಡೆಯಲು ಯತ್ನಿಸುತ್ತಿದೆ.


COMMERCIAL BREAK
SCROLL TO CONTINUE READING

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೋದಿಯವರಿಗೆ ವಂಚನೆಯ ಹಣವನ್ನು ಹಿಂತಿರುಗಿಸಲು ಸೂಕ್ತ ಯೋಜನೆಯೊಂದಿಗೆ ಬರಲು ತಿಳಿಸಿದೆ. ಯಾವುದೇ ಕ್ರಮಗಳನ್ನು ಅನುಸರಿಸದೆ 11,300 ಕೋಟಿ ರೂಗಳನ್ನು ನೀರವ್ ಕಂಪೆನಿಗಳು ಹಣವನ್ನು ಪಡೆದಿವೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸಹಿತ ಅಕ್ರಮವಾಗಿ ಸಾಲ ನೀಡಲು  ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.