ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ತಮ್ಮನ್ನು ತಾವು ಪ್ರಸ್ತುತಪಡಿಸುವ ವಿಧಾನವನ್ನು ನಿರ್ಧರಿಸುವುದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರದ್ದು, ಅವರು ಉತ್ತಮ ಕ್ಯಾಪ್ಟನ್ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್  ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಬಿಜೆಪಿಗೆ ಪ್ರಮುಖ ಚಾಲೆಂಜರ್ ಆಗಿ ಹೊರಹೊಮ್ಮಲಿದೆ ಮತ್ತು ಪಕ್ಷವು ತನ್ನ ಎಲ್ಲ ಶಕ್ತಿಯಿಂದ ಚುನಾವಣೆಯಲ್ಲಿ ಹೋರಾಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಿಯಾಂಕಾ ಗಾಂಧಿ (Priyanka Gandhi) ನಿರ್ಧರಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು.


ಇದನ್ನೂ ಓದಿ: ವಾರಣಾಸಿಯ ನೇಕಾರರ ದುಃಸ್ಥಿತಿಯ ಬಗ್ಗೆ ಸಿಎಂ ಯೋಗಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ


ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖುರ್ಷಿದ್ ಅವರು ಕಾಂಗ್ರೆಸ್ ಮೈತ್ರಿಗಾಗಿ ಕಾಯುತ್ತಿರುವುದಿಲ್ಲ ಎಲ್ಲ ಸಾಮರ್ಥ್ಯದೊಂದಿಗೆ ಮುಂದಿನ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ.ಪ್ರಿಯಾಂಕಾ ಗಾಂಧಿ ಅವರು ಮುಖ್ಯಮಂತ್ರಿ ಮುಖವಾಗಲು ಪಕ್ಷದ ಅತ್ಯುತ್ತಮ ಅಭ್ಯರ್ಥಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ,ಉತ್ತರಿಸಿದ ಖುರ್ಷಿದ್, "ಅವರು ನಮಗೆ ಸೂಚನೆಯನ್ನು ನೀಡದಿರುವವರೆಗೂ ನಾನು ಉತ್ತರಿಸಲು ಹೋಗುವುದಿಲ್ಲ. ಆದರೆ ಅವರು ಅದ್ಭುತ, ಶ್ರೇಷ್ಠ ಮುಖ "ಎಂದು ಹೇಳಿದರು.


"ನೀವು ಮಾಡಬೇಕಾಗಿರುವುದು ಯೋಗಿ ಆದಿತ್ಯನಾಥ್ (Yogi Adityanath) ಅವರ ಚಿತ್ರವನ್ನು ಮತ್ತು ಪ್ರಿಯಾಂಕಾ ಗಾಂಧೀ ಚಿತ್ರವನ್ನು ನಿಮ್ಮ ಮುಂದೆ ಇಡುವುದು, ಹಾಗೆ ಮಾಡಿದಾಗ ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಪ್ರಮಯ ಬರುವುದಿಲ್ಲ ಎಂದು ಪಕ್ಷದ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾದ ಸಲ್ಮಾನ್ ಖುರ್ಷಿದ್ ಹೇಳಿದರು.


ಇದನ್ನೂ ಓದಿ: ಕೇಂದ್ರದ ನೋಟಿಸ್ ನಂತರ ಸರ್ಕಾರಿ ಬಂಗಲೆಯ ಬಾಕಿ ಹಣ ಪಾವತಿಸಿದ ಪ್ರಿಯಾಂಕಾ ಗಾಂಧಿ...!


'ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ನಮಗೆ ತಿಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮಗೆ ಸಂಬಂಧಪಟ್ಟಂತೆ ಅವರು ಕ್ಯಾಪ್ಟನ್ ಮತ್ತು ಅವರು ನಮ್ಮನ್ನು ಮುನ್ನಡೆಸುತ್ತಿದ್ದಾರೆ" ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.


ಪ್ರಿಯಾಂಕಾ ಗಾಂಧಿಯವರ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ಇನ್ನೂ ಯುಪಿ ಯಲ್ಲಿ ಪ್ರಮುಖ ಚಾಲೆಂಜರ್ ಆಗಿಲ್ಲವಾದ್ದರಿಂದ, ಸಲ್ಮಾನ್ ಖುರ್ಷಿದ್ ಅವರು ಈಗಿನಂತೆ ಪಕ್ಷವು ಪ್ರಮುಖ ಚಾಲೆಂಜರ್ ಅಲ್ಲ ಎಂದು ಒಪ್ಪಿಕೊಂಡರು, ಆದರೆ 2022 ರಲ್ಲಿ ಚುನಾವಣೆಗೆ ಮುನ್ನವೇ ಆಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಕಾಂಗ್ರೆಸ್ಗೆ ಏಕಾಂಗಿಯಾಗಿ ಹೋಗುವ ಸಾಮರ್ಥ್ಯವಿದೆಯೇ ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ಸಲ್ಮಾನ್ ಖುರ್ಷಿದ್  "ನಾನು ಅರ್ಥಮಾಡಿಕೊಂಡಂತೆ ಮೈತ್ರಿಕೂಟದ ಬಗ್ಗೆ ಯಾರೂ ನಮ್ಮೊಂದಿಗೆ ನಿರ್ದಿಷ್ಟವಾಗಿ ಮಾತನಾಡಲಿಲ್ಲ, ಕಾಲ್ಪನಿಕತೆಗಳನ್ನು ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು.


ಇದನ್ನೂ ಓದಿ: Coronavirus: ಈ ರಾಜ್ಯದಲ್ಲಿ ನಿಯಂತ್ರಣ ಮೀರಿದ ಕೊರೊನಾ, ಮಾರ್ಚ್ 28 ರಿಂದ Night Curfew ಘೋಷಣೆ


2017 ರ ವಿಧಾನಸಭಾ ಚುನಾವಣೆಯಲ್ಲಿ 403 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಗೆದ್ದರೆ, ಅದರ ಮೈತ್ರಿ ಪಾಲುದಾರ ಸಮಾಜವಾದಿ ಪಕ್ಷ (ಎಸ್‌ಪಿ) 47 ಸ್ಥಾನಗಳನ್ನು ಗಳಿಸಿತ್ತು. 312 ಸ್ಥಾನಗಳೊಂದಿಗೆ ಬಿಜೆಪಿ ಭರ್ಜರಿ ಜನಾದೇಶವನ್ನು ಗೆದ್ದರೆ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) 19 ಸ್ಥಾನಗಳನ್ನು ಗಳಿಸಿತ್ತು.


ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕಳೆದ ವಾರ ಸಂದರ್ಶನವೊಂದರಲ್ಲಿ, ತಮ್ಮ ಪಕ್ಷವು ದೊಡ್ಡ ಪಕ್ಷಗಳೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಸಣ್ಣ ಪಕ್ಷಗಳೊಂದಿಗೆ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತದೆ ಎಂದು ಹೇಳಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.