ನವದೆಹಲಿ: ನೂತನವಾಗಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ  ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಫೆಬ್ರುವರಿ 11 ರಂದು ಲಕ್ನೋದಲ್ಲಿ ರೋಡ್ ಶೋ ಮೂಲಕ ಅಧಿಕೃತ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಸೋಮವಾರದಂದು ತುಘಲಕ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರನ್ನು  ಭೇಟಿಯಾಗಿದ್ದ  ಪ್ರಿಯಾಂಕಾ ಗಾಂಧಿ ವಾದ್ರಾ  ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದಾಗ ವಿದೇಶ ಪ್ರವಾಸದಲ್ಲಿದ್ದರು.ಈಗ ಲಕ್ನೋ ಪ್ರವಾಸದ ಮೂಲಕ ಅವರು  ರಾಜಕೀಯ ಪ್ರವೇಶವನ್ನು ಖಚಿತಪಡಿಸಲಿದ್ದಾರೆ ಎನ್ನಲಾಗಿದೆ.


ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಆದ ನಂತರ ಅವರ ಅಕ್ಬರ್ ರಸ್ತೆಯಲ್ಲಿರುವ  ಪಕ್ಷದ ಪ್ರಧಾನ ಕಛೇರಿಯಲ್ಲಿರುವ ಆಫೀಸ್ ನಲ್ಲಿ ರಾಹುಲ್ ಕಚೇರಿ ಪಕ್ಕದಲ್ಲಿಯೇ ಅವರಿಗೆ ರೂಮನ್ನು ಕಲ್ಪಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕ ಸೀಟುಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿಯವರಿಗೆ ಈಗ ಪಕ್ಷದ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ಈಗ ಅವರ ಜನಪ್ರಿಯತೆ ಮುಂಬರುವ ಚುನಾವಣೆಯಲ್ಲಿ ನೆರವಾಗುತ್ತೋ ಇಲ್ಲವೋ ಎನ್ನುವ ವಿಚಾರಕ್ಕೆ ಕಾಲವೇ ಉತ್ತರ ನೀಡಲಿದೆ.