ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಎರಡನೇ ಇಂದಿರಾ ಗಾಂಧಿ ಮತ್ತು ಬದಲಾವಣೆಯ ಚಂಡಮಾರುತ ಎಂದು ಬಣ್ಣಿಸಿದ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಅವರ ನಾಯಕತ್ವದಲ್ಲಿ ಪಕ್ಷವು ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

'ಪ್ರಿಯಾಂಕಾ ಗಾಂಧಿ ಎರಡನೇ ಇಂದಿರಾ ಗಾಂಧಿ. ಅವರು ಬದಲಾವಣೆಯ ಚಂಡಮಾರುತ (ಬದ್ಲಾವ್ ಕಿ ಯೆ ಆಂಧಿ, ಜಿಸ್ಕಾ ನಾಮ್ ಪ್ರಿಯಾಂಕಾ ಗಾಂಧಿ ಹೈ). ಅವರ ನಾಯಕತ್ವದಲ್ಲಿ ಕಾಂಗ್ರೆಸ್ 2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ವಿಜಯಶಾಲಿಯಾಗಲಿದೆ' ಎಂದು ಅವರು ಹೇಳಿದರು.'ಈ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರಿಗೂ ಭಯಪಡುತ್ತದೆ, ಏಕೆಂದರೆ ಸಹೋದರ-ಸಹೋದರಿ ಬೀದಿಗಿಳಿದರೆ ಅವರ ಬೆವರಿಳಿಯುವುದು ಖಂಡಿತ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.


2022 ರ ಚುನಾವಣೆಯಲ್ಲಿ ಅವರು ಪಕ್ಷದ ಸಿಎಂ ಅಭ್ಯರ್ಥಿಯಾಗುತ್ತಿರೆಯೇ ಎಂದು ಅಜಯ್ ಕುಮಾರ್ ಲಲ್ಲುರನ್ನು ಕೇಳಿದಾಗ, "ಇಲ್ಲ. ನಾನು ಪಕ್ಷದ ಕಾರ್ಯಕರ್ತ ಮಾತ್ರ, ಮತ್ತು ಪಕ್ಷದ ಸಿದ್ಧಾಂತಕ್ಕಾಗಿ ಕೆಲಸ ಮಾಡುವುದು ನನ್ನ 'ಧರ್ಮ'. ಕಾಂಗ್ರೆಸ್ ಗೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದ ಇತಿಹಾಸವಿದೆ ಮತ್ತು ಈ ಹೋರಾಟಗಳ ಆಧಾರದ ಮೇಲೆ ಇತಿಹಾಸವನ್ನು ಬದಲಾಯಿಸಲಾಗಿದೆ ಎಂದರು.


'ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿಯವರ ಸಿದ್ಧಾಂತಕ್ಕೆ ಬದ್ಧವಾಗಿದೆ ಮತ್ತು ಸತ್ಯ ಮತ್ತು ಅಹಿಂಸೆಯ ಹಾದಿಯನ್ನು ಪ್ರಾರಂಭಿಸುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಅವರು ಹೇಳಿದರು. ಇದಕ್ಕೆ ವಿರುದ್ಧವಾಗಿ, ಬಿಜೆಪಿಯ ಕಾರ್ಯಶೈಲಿ ಮತ್ತು ನೀತಿಗಳು ವಿಭಜಕವಾಗಿವೆ' ಎಂದು ಅವರು ಆರೋಪಿಸಿದರು.


ತಮ್ಕುಹಿ ರಾಜ್ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಲಲ್ಲು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹತ್ತಿರವೆಂದು ಪರಿಗಣಿಸಲಾಗಿದೆ. ಯುಪಿ ಕಾಂಗ್ರೆಸ್ ಮುಖ್ಯಸ್ಥರಾಗುವ ಮೊದಲು ಅವರು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರು.