ನವದೆಹಲಿ: ಈ ಬಾರಿಯ ಚಳಿಗಾಲ ಅಧಿವೇಶನವು ಸಮಯದ ಸದ್ಬಳಕೆಯಲ್ಲಿ ಅತಿ ಕಳಪೆ ಪ್ರದರ್ಶನ ನೀಡಿದೆ. ಇದು ಪ್ರಸಕ್ತ 16ನೇ ಲೋಕಸಭೆಯಲ್ಲಿ ಮೂರನೇ ಅತಿ ಕಳಪೆ ಪ್ರದರ್ಶನ ಎನ್ನುವ ಅಂಶ ಈಗ ಪಿ.ಆರ್.ಎಸ್ ಲೇಜಿಸ್ಲೇಟಿವ್ ರಿಸರ್ಚ್ ನಡೆಸಿದ ವರದಿಯಲ್ಲಿ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

16ನೇ ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಹಲವಾರು ಅಡೆತಡೆಗಳ ಕಾರಣದಿಂದಾಗಿ ಎರಡು ದಿನಗಳ ಅವಧಿಯಲ್ಲಿ ಸಂಪೂರ್ಣ ಪ್ರಶ್ನಾವಳಿ ಅವಧಿಯನ್ನು ಮುಗಿಸಲಾಗಿದೆ. ಈ ಬಾರಿ ಲೋಕಸಭಾ ಆರನೇ ಭಾಗದಷ್ಟು ಸಮಯವನ್ನು ಕಳೆದುಕೊಂಡಿದ್ದರೆ, ರಾಜ್ಯಸಭಾದಲ್ಲಿ ಮೂರರಷ್ಟು ನಿಗಧಿ ಪಡಿಸಿದ ಸಮಯವ್ಯರ್ಥವಾಗಿದೆ ಎಂದು ಪಿ.ಆರ್.ಎಸ್ ತಿಳಿಸಿದೆ.14ನೇ ಮತ್ತು 15ನೇ ಲೋಕಸಭೆಗೆ ಹೋಲಿಸಿದರೆ, ಈ ಲೋಕಸಭೆಯ ಶಾಸಕಾಂಗದ ವ್ಯವಹಾರದ ಮೇಲೆ ಹೆಚ್ಚಿನ ಸಮಯವನ್ನು ಕಳೆದಿದೆ.


ಈ ಬಾರಿ ಲೋಕಸಭೆಯಲ್ಲಿ ಶೇ.52 ರಷ್ಟು ಸದುಪಯೋಗ ಪಡಿಸಿಕೊಂಡಿದ್ದರೆ, ರಾಜ್ಯಸಭೆಯು ಶಾಸಕಾಂಗ ವ್ಯವಹಾರದಲ್ಲಿ ಶೇ 17ರಷ್ಟು ಸಮಯವನ್ನು ವ್ಯಯಮಾಡಲಾಗಿದೆ. ಈ ಬಾರಿಯ ಲೋಕಸಭೆಯಲ್ಲಿ ಶೇ 62 ರಷ್ಟು ಮಸೂದೆಗಳ ಮೇಲೆ ಎರಡು ಘಂಟೆಗಳಿಗೂ ಅಧಿಕ ಸಮಯದವರೆಗೆ ವ್ಯಯಮಾಡಲಾಗಿದೆ.ಆದರೆ ರಾಜ್ಯಸಭೆಯಲ್ಲಿ ಅದು ಸ್ಥಿರವಾಗಿದ್ದು ,ಶೇ.25 ರಿಂದ 35 ರಷ್ಟು ಮಸೂದೆಗಳು ಎರಡು ಗಂಟೆಗೂ ಅಧಿಕ ಸಮಯದ ಕಾಲವನ್ನು ವ್ಯಯ ಮಾಡಲಾಗಿದೆ.


14 (29 ಶೇ.) ಮತ್ತು 15 ಲೋಕಸಭೆಗೆ (18 ಶೇ.) ಹೋಲಿಸಿದರೆ 16ನೇ ಲೋಕಸಭೆ (34 ಶೇ.) ಅಧಿವೇಶನದಲ್ಲಿ ಹೆಚ್ಚಿನ ಮಸೂದೆಗಳನ್ನು ಪರಿಚಯಿಸಲಾಗಿದೆ ಮತ್ತು ಜಾರಿಗೆ ತರಲಾಗಿದೆ. ಈ ಬಾರಿ 16 ಮಸೂದೆಗಳನ್ನು ಪರಿಚಯಿಸಲಾಯಿತು ಮತ್ತು ಅದರಲ್ಲಿ 3 ಮಸೂದೆಗಳನ್ನು ಎರಡು ಸದನದಲ್ಲಿ ಜಾರಿಗೊಳಿಸಲಾಗಿದೆ.