ಸಂರಕ್ಷಣಾ ನೀತಿ ಎಂದಿಗೂ ಕೂಡ ಉದ್ಯೋಗ ರಕ್ಷಣೆಗೆ ಸಹಾಯ ಮಾಡುವುದಿಲ್ಲ- ರಘುರಾಮ್ ರಾಜನ್
ಯಾಂತ್ರೀಕೃತಗೊಂಡ ಮತ್ತು ಕೃತಕ ಬುದ್ಧಿಮತ್ತೆಯ ಪರಿಣಾಮವಾಗಿ ಉದ್ಯೋಗದ ಪ್ರಮಾಣದಲ್ಲಿ ಸಾಕಷ್ಟು ಕುಸಿತ ಕಂಡಿದೆ. ಇದಕ್ಕೆ ರಕ್ಷಣಾತ್ಮಕ ನೀತಿ ನಿಜವಾಗಿ ಉದ್ಯೋಗ ಸಂರಕ್ಷಣೆಗೆ ಸಹಾಯ ಮಾಡುವುದಿಲ್ಲವೆಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಿಳಿಸಿದರು.
ನವದೆಹಲಿ: ಯಾಂತ್ರೀಕೃತಗೊಂಡ ಮತ್ತು ಕೃತಕ ಬುದ್ಧಿಮತ್ತೆಯ ಪರಿಣಾಮವಾಗಿ ಉದ್ಯೋಗದ ಪ್ರಮಾಣದಲ್ಲಿ ಸಾಕಷ್ಟು ಕುಸಿತ ಕಂಡಿದೆ. ಇದಕ್ಕೆ ರಕ್ಷಣಾತ್ಮಕ ನೀತಿ ನಿಜವಾಗಿ ಉದ್ಯೋಗ ಸಂರಕ್ಷಣೆಗೆ ಸಹಾಯ ಮಾಡುವುದಿಲ್ಲವೆಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಿಳಿಸಿದರು.
ಈ ಸಂದರ್ಭದಲ್ಲಿ ಔದ್ಯೋಗಿಕ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತಿಕರಣದಿಂದ ಹಾಗೂ ಯಾಂತ್ರಿಕರಣದಿಂದ ಉಂಟಾಗಿರುವ ಪ್ರಜಾಪ್ರಭುತ್ವ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 2019 ರ ECOSOC ಫೋರಂ ಉದ್ದೇಶಿಸಿ ಪ್ರಮುಖ ಭಾಷಣ ಮಾಡಿದ ರಘುರಾಮ್ ರಾಜನ್ ಎರಡನೇ ವಿಶ್ವ ಸಮರದ ನಂತರ ಆರು ದಶಕಗಳಲ್ಲಿ ಅಗಾಧ ಸಂಪತ್ತು ಮುಕ್ತ ಮಾರುಕಟ್ಟೆಯ ಮೂಲಕ ಹರಿದು ಬಂದಿದೆ.ಆದರೆ ಇಂದು ಅದು ಅಪಾಯವನ್ನು ಎದುರಿಸುತ್ತಿದೆ.ಈ ಹಿನ್ನಲೆಯಲ್ಲಿ ಉದ್ಯೋಗ ಸೃಷ್ಟಿ ಈಗ ಆಪತ್ತನ್ನು ಎದುರಿಸುತ್ತಿದೆ ಎಂದು ಅವರು ತಿಳಿಸಿದರು.
ಈಗ ಇದರ ಪರಿಣಾಮವಾಗಿ ಈ ವ್ಯವಸ್ಥೆಗೆ ಟೀಕೆಗಳು ಬರುತ್ತಿರುವುದು ತೀವ್ರಗಾಮಿ ಚಿಂತಕರಾಗಲಿ ಅಥವಾ ಎಡಪಂಥೀಯ ನಾಯಕರುಗಳ ಮೂಲಕವಲ್ಲ , ಬದಲಿಗೆ ಮುಕ್ತ ಮಾರುಕಟ್ಟೆಯ ಲಾಭವನ್ನು ಪಡೆದ ವಿಶ್ವದ ಶ್ರೀಮಂತ ರಾಷ್ಟ್ರಗಳಿಂದ ಎಂದು ರಾಜನ್ ಅಭಿಪ್ರಾಯಪಟ್ಟರು.