ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನಿಮ್ಮ ಹಣಕಾಸಿನ ಕುರಿತು ಹಲವು ಸೌಕರ್ಯಗಳನ್ನು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಸಣ್ಣ ಉಳಿತಾಯದ ಯೋಜನೆಗಳಲ್ಲಿಯೂ ಕೂಡ ತಿದ್ದುಪಡಿ ತರಲಾಗುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ನಿಮ್ಮ PF ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿಯೂ ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ. EPFO ನೀಡಿರುವ ಮಾಹಿತಿಗಳ ಪ್ರಕಾರ ಶೀಘ್ರವೇ EPFO ನಿಮ್ಮ PF ಖಾತೆಗೆ ನೀವು ನೀಡುತ್ತಿರುವ ಕೊಡುಗೆಯನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ಶೀಘ್ರವೇ ಶೇ.12ರಿಂದ ಶೇ.10ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಪಿಎಫ್ ಖಾತೆಗೆ ನಿಮ್ಮ ಕೊಡುಗೆಯಲ್ಲಿ ಕಡಿಮೆಯಾಗಲಿದೆ.
ಮೂಲಗಳ ಪ್ರಕಾರ EPFO ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದ್ದು, ಹೊಸ ನಿಯಮದಲ್ಲಿ ನೌಕರರು ತಾವು ತಮ್ಮ PF ಖಾತೆಗೆ ನೀಡುತ್ತಿರುವ ಕೊಡುಗೆಯನ್ನು ಕಡಿಮೆ ಮಾಡಬಹುದು. ಆದರೆ, ಇದರ ಕನಿಷ್ಠ ಮಟ್ಟ ಎಷ್ಟು ಇರಲಿದೆ ಇದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ, ಈ ನಿಯಮ ಕಂಪನಿಯ ಮೇಲೆ ಯಾವುದೇ ವಿಪರೀತ ಪರಿಣಾಮ ಬೀರದು ಮತ್ತು ಕಂಪನಿಗಳು ತಮ್ಮ ನೌಕರರ ಪಿಎಫ್ ಖಾತೆಗೆ ಶೇ.12ರಷ್ಟು ಹಣವನ್ನೇ ಸೇರಿಸಬಹುದಾಗಿದೆ.


ಏನಿದೆ ಹೊಸ ನಿಯಮದಲ್ಲಿ?
ನೌಕರರ ಕೈಗೆ ಅವರ ಸಂಬಳದ ಹೆಚ್ಚಿನ ಅಂಶವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ನೌಕರರು ತಮ್ಮ PF ಖಾತೆಗೆ ಎಷ್ಟು ಹಣ ಸೇರಿಸಬೇಕು ಎಂಬ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇರಲಿದೆ. ಅಂದರೆ ಅವರು ಶೇ.12ರ ಬದಲಾಗಿ ಶೇ.10ರಷ್ಟು ಕೊಡುಗೆಯನ್ನು ಸಹ ನೀಡಬಹುದು. ಇದರ ಜೊತೆಗೆ ನೌಕರರಿಗೆ ಅವರ ಸ್ಯಾಲರಿ ಕಂಪೋನೆಂಟ್ ನ ಬೇರೆ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಇದರಿಂದ ನೌಕರರು ಬೇರೆ ಯಾವುದಾದರೊಂದು ಸ್ಕೀಮ್ ನಲ್ಲಿ ತಮ್ಮ ಹಣ ತೊಡಗಿಸಬಹುದಾಗಿದೆ. ಈಗಾಗಲೇ ಈ ಕುರಿತಾದ ಸೋಸಿಯಲ್ ಸೆಕ್ಯೂರಿಟಿ ಕೋಡ್ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಈ ನಿಯಮ ಕೂಡ ಅದೇ ಅಧಿನಿಯಮದ ಒಂದು ಭಾಗವಾಗಿದೆ. ಆದರೆ, ಇದನ್ನು ಜಾರಿಗೊಳಿಸಲು ಮೊದಲು ಈ ಮಸೂದೆಯನ್ನು ಸಂಸತ್ತಿನ ಉಭಯ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಾಗಲಿದ್ದು, ಬಜೆಟ್ ಅಧಿವೇಶನದ ಎರಡನೇ ಅವಧಿಯಲ್ಲಿ ಇದು ಚರ್ಚೆಗೆ ಬರುವ ಸಾಧ್ಯತೆ ಇದೆ.


ಇದರಿಂದ ಲಾಭ ಏನು?
PF ಖಾತೆಗೆ ನೌಕರರ ಕೊಡುಗೆ ಕಮ್ಮಿಯಾಗುವ ಮೂಲಕ ನೌಕರರು ತಮ್ಮ ಸಂಬಳದ ಹೆಚ್ಚಿನ ಭಾಗವನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಕೇಂದ್ರ ಸರ್ಕಾರ ಕೂಡ ಇದೆ ಉದ್ದೇಶದಿಂದ ಇದನ್ನು ಜಾರಿಗೊಳಿಸಲು ಯೋಜಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಷ್ಟೇ ಅಲ್ಲ ಇದರಿಂದ ಹಣ ಖರ್ಚು ಮಾಡಲು ನೌಕರರ ಬಳಿ ಹೆಚ್ಚಿನ ಹಣ ಉಳಿಯಲಿದ್ದು ಇದರಿಂದ ದೇಶದ ಆರ್ಥಿಕತೆಗೆ ಕೂಡ ಒತ್ತು ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, PFನ ಈ ನೂತನ ನಿಯಮ ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಲಿದೆ ಎಂದೂ ಸಹ ಹೇಳಲಾಗುತ್ತಿದೆ.


ಇದರ ಹಾನಿ ಏನು?
ಒಂದೆಡೆ ಇದು ನೌಕರರ ಕೈಯಲ್ಲಿ ಖರ್ಚಿಗಾಗಿ ಹೆಚ್ಚಿನ ಹಣ ನೀಡಲಿದ್ದರೇ, ಇನ್ನೊಂದೆಡೆ ಇದು ನೌಕರರ ಭವಿಷ್ಯನಿಧಿ ಮೇಲೆ ವಿಪರೀತ ಪರಿಣಾಮ ಕೂಡ ಬೀರಲಿದೆ. PF ಖಾತೆಗೆ ನೌಕರರ ಕೊಡುಗೆ ಕಡಿಮೆಯಾಗುವುದರಿಂದ, ರಿಟೈರ್ ಮೆಂಟ್ ಬಳಿಕ ಸಿಗುವ ಮೊತ್ತದ ಮೇಲೆ ಇದು ಪರಿಣಾಮ ಬೀರಲಿದ್ದು, ನಿಮ್ಮ PF ಹಣ ಉಳಿತಾಯ ಕೂಡ ಇಳಿಕೆಯಾಗಲಿದೆ.


ಸದ್ಯ ಈ ನಿಯಮ ಅಸ್ತಿತ್ವದಲ್ಲಿದೆ
ಸದ್ಯ ಇರುವ ನಿಯಮದ ಪ್ರಕಾರ ನೌಕರರು ಹಾಗೂ ನೌಕರಿದಾತರು ನೌಕರರ ಭವಿಷ್ಯನಿಧಿಗೆ ಶೇ.12-ಶೇ.12 ರಷ್ಟು ಕೊಡುಗೆ ನೀಡಬೇಕು. ಆರ್ಗನೈಜ್ಡ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸುವ ನೌಕರರು ಮತ್ತು ನೌಕರಿದಾತರು ನೌಕರರ ಬೇಸಿಕ್ ಸ್ಯಾಲರಿಯ ಶೇ.12ರಷ್ಟು ಹಣವನ್ನು ನೌಕರರ ಭವಿಷ್ಯನಿಧಿಗೆ ಕೊಡುಗೆ ನೀಡಬಹುದು. ಹೊಸ ನಿಯಮದಿಂದ ಈ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ. ಅದರಲ್ಲೂ ವಿಶೇಷವಾಗಿ MSME, ಜವಳಿ ಹಾಗೂ ಸ್ಟಾರ್ಟ್ ಅಪ್ ಕ್ಷೇತ್ರಗಳಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆ ಇದೆ. ಆದರೆ, ಬೇರೆ ಸೆಕ್ಟರ್ ಗಳಲ್ಲಿ ಈ ನಿಯಮ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದು ಮಸೂದೆ ಜಾರಿಗೆ ಬಂದ ಬಳಿಕವೇ ಸ್ಪಷ್ಟವಾಗಲಿದೆ.