ಭಾರತದಲ್ಲಿ PUBG Mobile ಮರು ಬಿಡುಗಡೆ ಮಾಡುವ ತನ್ನ ಯೋಜನೆಯನ್ನ ಕಂಪನಿ ಕೊನೆಗೂ ಬಹಿರಂಗಪಡಿಸಿದೆ. ಈಗ ಗೇಮ್ ನಲ್ಲಿ ಆಟಗಾರರು ಹೊಸ 'ಟೇಲರ್ಡ್' ಅನುಭವವನ್ನ ಪಡೆಯಲಿದ್ದಾರೆ. . ಆದ್ರೆ, ಕಂಪನಿ ಭಾರತದಲ್ಲಿ ಗೇಮ್ ಲಾಂಚಿಂಗ್ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ, ಭಾರತದಲ್ಲಿ ಮತ್ತೆ ಲಾಂಚ್ ಮಾಡಲು ಕಂಪನಿ ಎಲ್ಲ ರೀತಿಯ ಸಿದ್ಧತೆಯನ್ನ ಮಾಡಿಕೊಂಡಿದೆ.


COMMERCIAL BREAK
SCROLL TO CONTINUE READING

ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಗಮನಕ್ಕೆ


PUBG Corporation ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ಸೃಷ್ಟಿಸಲಾದ ಹೊಸ ಗೇಮ್ ಅನ್ನ ರಿಲಾಂಚ್ ಮಾಡಲು ತಯಾರಿ ನಡೆಸುತ್ತಿರುವುದಾಗಿ ದಕ್ಷಿಣ ಕೊರಿಯಾದ KRAFTON, Inc.ನ ಅಂಗ ಸಂಸ್ಥೆಯಾಗಿರುವ PUBG ಕಾರ್ಪೊರೇಷನ್ ಪ್ರಕಟಿಸಿದೆ. ಸ್ಥಳೀಯ ವೀಡಿಯೊ ಗೇಮ್, ಇಸ್ಪೋರ್ಟ್ಸ್, ಮನರಂಜನೆ ಮತ್ತು ಐಟಿ ಉದ್ಯಮಗಳನ್ನ ಬೆಳೆಸಲು ಹೂಡಿಕೆಗಳ ಜೊತೆ ಸುರಕ್ಷಿತ ಗೇಮ್ ಪ್ಲೇ ಕ್ಲೈಮೇಟ್ ಒದಗಿಸುವ ಯೋಜನೆಗಳನ್ನ ಸಹ ಕಂಪನಿ ಬಹಿರಂಗಪಡಿಸಿದೆ.


ಶಾಲಾ ಪುನರಾರಂಭ ನಿರ್ಧಾರದಿಂದ ಹಿಂದೆ ಸರಿದ ತಮಿಳುನಾಡು


PUBG Corporation ಹೊಸ ಗೇಮ್ ಅನ್ನ ಭಾರತೀಯ ಆಟಗಾರರ ಡೇಟಾ ಗೌಪ್ಯತೆ ಮತ್ತು ಸುರಕ್ಷತೆ ಆದ್ಯತೆಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿದೆ. ಭದ್ರತೆಯನ್ನ ಬಲಪಡಿಸಲು ಮತ್ತು ಅವರ ಡೇಟಾವನ್ನ ಸುರಕ್ಷಿತವಾಗಿ ನಿರ್ವಹಿಸಲಾಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಭಾರತೀಯ ಬಳಕೆದಾರರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನ ಹೊಂದಿರುವ ಶೇಖರಣಾ ವ್ಯವಸ್ಥೆಗಳ ಮೇಲೆ ನಿಯಮಿತ ಆಡಿಟ್ ಮತ್ತು ಪರಿಶೀಲನೆಗಳನ್ನು ನಡೆಸುವುದಾಗಿ ಕಂಪನಿ ಹೇಳಿಕೊಂಡಿದೆ.


ಗುಡ್ ನ್ಯೂಸ್! ಹೆಚ್ಚಿನ ಉತ್ಪಾದನೆಗೆ ಸಿಗಲಿದೆ ಅಧಿಕ ಬೋನಸ್, ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ