ನವದೆಹಲಿ: ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಲು ದಕ್ಷಿಣದ ರಾಜ್ಯಗಳು ಹಿಂದಿ ಕಲಿಯಬೇಕೆಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಆಗ್ರಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾಷೆಗಳು ಜನರ ನಡುವೆ ಭಾವನಾತ್ಮಕ ಸಂಪರ್ಕವನ್ನು ಸಕ್ರೀಯಗೊಳಿಸುವ ಶಕ್ತಿ ಎಂದು ಹೇಳಿದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ತಾವು ಎಲ್ಲ ಸಮಯದಲ್ಲೂ ಇಲ್ಲಿ ಟ್ರಾನ್ಸ್ ಲೇಟರ್ ಬಳಸಬೇಕಾಗಿದೆ. ನಮ್ಮ ಭಾಷೆ ಕಲಿತ ಹಿಂದಿಯೇತರು ತಮ್ಮ ಸಾಂಸ್ಕೃತಿಕ ಮೌಲ್ಯ ಅಥವಾ ಪರಂಪರೆಯ ಕ್ಷೀಣಿಸುತ್ತಿದೆ ಎಂದು ಭಾವಿಸುವುದಿಲ್ಲ ಎಂದು ಹೇಳಿದರು. ಅಲ್ಲದೆ ವಿವಿಧ ರಾಜ್ಯಗಳ ಜನರ ನಡುವೆ ಸ್ಪಷ್ಟವಾದ ಸಂಪರ್ಕ ಕಡಿತವನ್ನು ತಾವು ಕಂಡಿರುವುದಾಗಿ ಹೇಳಿದ ಬೇಡಿ ಈ ಅಂತರವನ್ನು ಇಂಗ್ಲಿಷ್ ತುಂಬುತ್ತಿದೆ ಎಂದು ಹೇಳಿದರು.


ಸಂಪರ್ಕ ಕಡಿತಗೊಂಡಿರುವುದನ್ನು ನೋಡಿ ನಾನು ಇದನ್ನೆಲ್ಲಾ ಹೇಳುತ್ತಿದ್ದೇನೆ. ಇಲ್ಲಿ  ಕೆಲವೊಮ್ಮೆ ಸಂಪರ್ಕಿಸುವ ಭಾಷೆ ಹಿಂದಿ ಅಲ್ಲ ಅದು ಇಂಗ್ಲಿಶ್ ಆಗಿದೆ, ಅದು ನಮ್ಮನ್ನು ಎಚ್ಚರಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮ ಭಾಷೆ ಏನು ಎಂದು ಅವರು ಪ್ರಶ್ನಿಸಿದರು. 'ನಾವು ದೆಹಲಿಯ ನಾಯಕತ್ವದೊಂದಿಗೆ ಸಂಪರ್ಕ ಹೊಂದಬೇಕು, ಭಾರತ ಸರ್ಕಾರ ಯಾರೇ ಆಗಿರಲಿ. ದಕ್ಷಿಣದ ಜನರು ಅನುವಾದಗಳನ್ನು ಮಾತ್ರ ಕೇಳುತ್ತಿದ್ದಾರೆ ಎಂಬುದು ಸತ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನಾಚರಣೆ ಮತ್ತು ಮನ್ ಕಿ ಬಾತ್ ಭಾಷಣಗಳನ್ನು ಉದಾಹರಣೆ ನೀಡಿದರು.


ಶನಿವಾರದಂದು ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ರಾಷ್ಟ್ರೀಯ ಭಾಷೆಯಾಗಬೇಕೆಂಬ ವಿವಾದಾತ್ಮಕ ಚರ್ಚೆಯನ್ನು ಪುನಃ ಪ್ರಚೋದಿಸಿದರು, ಇದು ದೇಶವನ್ನು ಒಂದುಗೂಡಿಸುವ ಸಾಮಾನ್ಯ ಭಾಷೆಯಾಗಿದೆ ಎಂದು ಅವರು ಹೇಳಿ ವಿವಾದ ಸೃಷ್ಟಿಸಿದರು. ಈ ಹೇಳಿಕೆಗೆ ದಕ್ಷಿಣದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.