Puducherry Political Crisis: ಬಹುಮತ ಸಾಬೀತಿಗೂ ಮುನ್ನವೇ 2 ಶಾಸಕರ ರಾಜೀನಾಮೆ
ಕಳೆದ ವಾರ ಮುಖ್ಯಮಂತ್ರಿಯೊಂದಿಗೆ ಆಪ್ತರಾಗಿರುವ ಶಾಸಕ ಎ ಜಾನ್ ಕುಮಾರ್ ಕೂಡ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರ ನಂತರ, 7 ಕಾಂಗ್ರೆಸ್-ಡಿಎಂಕೆ ಶಾಸಕರು ಈವರೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಒಬ್ಬ ಶಾಸಕರ ಅನರ್ಹತೆಯ ನಂತರ, ಕೇವಲ 25 ಸದಸ್ಯರು ಮಾತ್ರ ವಿಧಾನಸಭೆಯಲ್ಲಿ ಉಳಿದಿದ್ದಾರೆ.
ಪುದುಚೇರಿ: ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಸಮ್ಮಿಶ್ರ ಸರ್ಕಾರ ಅಳಿವಿನ ಅಂಚಿಗೆ ಬಂದಿದೆ. ಮೊದಲೇ ಸಂಕಷ್ಟದಲ್ಲಿದ್ದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಸಾಬೀತಿಗೂ ಮೊದಲೇ ಇನ್ನಿಬ್ಬರು ಶಾಸಕರ ರಾಜೀನಾಮೆಯಿಂದ ದೊಡ್ಡ ಆಘಾತವಾಗಿದೆ.
ಹೌದು, ಇತ್ತೀಚಿಗೆ ಕಾಂಗ್ರೆಸ್ ಮತ್ತು ಡಿಎಂಕೆಯ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ನಂತರ 33 ಸದಸ್ಯರ ವಿಧಾನಸಭೆಯಲ್ಲಿ ಕೇವಲ 25 ಶಾಸಕರು ಮಾತ್ರ ಉಳಿದಿದ್ದಾರೆ. ಆದರೆ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ಕೇವಲ 11 ಶಾಸಕರು ಮಾತ್ರ ಉಳಿದಿದ್ದಾರೆ. ಅದೇ ಸಮಯದಲ್ಲಿ, ಕಾಂಗ್ರೆಸ್-ಡಿಎಂಕೆ ಸರ್ಕಾರ ಫೆಬ್ರವರಿ 22 ರಂದು ತನ್ನ ಬಹುಮತವನ್ನು ಸಾಬೀತುಪಡಿಸಬೇಕಿತ್ತು. ಇದೀಗ ಇನ್ನಿಬ್ಬರು ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ವಿ ನಾರಾಯಣಸಾಮಿ ಸರ್ಕಾರ ಬಹುಮತ ಸಾಬೀತಿಗೂ ಮೊದಲೇ ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ.
ಎಂಟು ಸ್ಥಾನಗಳು ಖಾಲಿ ಇವೆ :
ಪುದುಚೇರಿ (Puducherry) ಸರ್ಕಾರದಲ್ಲಿದ್ದ ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಭಾನುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರ ನಂತರ ವಿ.ನಾರಾಯಣಸಾಮಿ ಅವರ ಸರ್ಕಾರದಲ್ಲಿ ಕೇವಲ 11 ಶಾಸಕರು ಮಾತ್ರ ಉಳಿದಿದ್ದಾರೆ. ಅದೇ ಸಮಯದಲ್ಲಿ 14 ಶಾಸಕರು ಪ್ರತಿಪಕ್ಷದಲ್ಲಿದ್ದಾರೆ. ಕೆ ಲಕ್ಷ್ಮೀನಾರಾಯಣ್ ಮತ್ತು ವೆಂಕಟೇಶನ್ ತಮ್ಮ ರಾಜೀನಾಮೆಗಳನ್ನು ಸ್ಪೀಕರ್ ವಿ.ಪಿ.ಶಿವಕೋಲುಂಡು ಅವರ ಮನೆಗೆ ಭೇಟಿ ನೀಡಿ ಸಲ್ಲಿಸಿದರು. ರಾಜೀನಾಮೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಲಕ್ಷ್ಮೀನಾರಾಯಣ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರಲ್ಲದೆ ನಾರಾಯಣಸಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ - ವಿಶ್ವಾಸಮತಯಾಚನೆಗೂ ಮುನ್ನವೇ ಕಾಂಗ್ರೆಸ್ ತೊರೆದ ಶಾಸಕರು...!
ಡಿಎಂಕೆ ಶಾಸಕರು ಪಕ್ಷವನ್ನು ಬಿಟ್ಟು ಹುದ್ದೆಯನ್ನು ತೊರೆದರು:
ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟೇಶನ್ ತಮ್ಮ ಶಾಸಕ ಹುದ್ದೆಗಷ್ಟೇ ರಾಜೀನಾಮೆ ನೀಡಿದ್ದೇನೆ. ಆದರೆ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ ಎಂದರು. ಈ ಸಂದರ್ಭದಲ್ಲಿ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾನು ನನ್ನ ಜನರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಶಾಸಕರ ನಿಧಿಯಡಿ ಹಣವನ್ನು ಸ್ವೀಕರಿಸುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾನು ಕಚೇರಿಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದರು.
ಐದು ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದರು, ಒಬ್ಬರು ಅನರ್ಹಗೊಂಡಿದ್ದಾರೆ
ಕಾಂಗ್ರೆಸ್ (Congress) ಶಾಸಕರಾದ ಎ ನಮಸಿಯಮ್ ಮತ್ತು ಮಲ್ಲಾಡಿ ಕೃಷ್ಣ ರಾವ್ ಅವರು ಸಚಿವರಾಗಿದ್ದರು. ಒಬ್ಬ ಶಾಸಕರನ್ನು ಅನರ್ಹಗೊಳಿಸಲಾಯಿತು. ಅದೇ ಸಮಯದಲ್ಲಿ, ಕಳೆದ ವಾರ ಮುಖ್ಯಮಂತ್ರಿಯೊಂದಿಗೆ ಆಪ್ತರಾಗಿರುವ ಶಾಸಕ ಎ ಜಾನ್ ಕುಮಾರ್ ಕೂಡ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರ ನಂತರ, ಈವರೆಗೆ 7 ಕಾಂಗ್ರೆಸ್-ಡಿಎಂಕೆ ಶಾಸಕರು ರಾಜೀನಾಮೆ ನೀಡಿದ್ದಾರೆ ಮತ್ತು ಒಬ್ಬ ಶಾಸಕರ ಅನರ್ಹತೆಯ ನಂತರ, ವಿಧಾನಸಭೆಯಲ್ಲಿ ಕೇವಲ 25 ಸದಸ್ಯರು ಮಾತ್ರ ಉಳಿದಿದ್ದಾರೆ.
ಇದನ್ನೂ ಓದಿ - DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ!
ಫೆಬ್ರವರಿ 22 ರಂದು ಬಹುಮತವನ್ನು ಸಾಬೀತುಪಡಿಸಬೇಕಾಗಿದೆ:
ಶಾಸಕರ ರಾಜೀನಾಮೆ ಪರ್ವದ ಹಿನ್ನಲೆಯಲ್ಲಿ ಫೆಬ್ರವರಿ 22 ರಂದು ತಮ್ಮ ಬಹುಮತವನ್ನು ಸಾಬೀತುಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರಾಜನ್ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರನ್ನು ಕೋರಿದ್ದಾರೆ. ಇದೀಗ ಇಡೀ ದೇಶದ ಚಿತ್ತ ಕಾಂಗ್ರೆಸ್ ಪಕ್ಷದ ದಕ್ಷಿಣದ ಕಟ್ಟ ಕಡೆಯ ಕೋಟೆಯತ್ತ ನೆಟ್ಟಿದ್ದು ಕಾಂಗ್ರೆಸ್ ಕೋಟೆ ಉಳಿಯುತ್ತಾ..? ಉರುಳುತ್ತಾ..? ಕಾದುನೋಡಬೇಕಿದೆ.
ಫೆಬ್ರವರಿ 25 ರಂದು ಪುದುಚೇರಿಗೆ ಭೇಟಿ ನೀಡಲಿರುವ ಪಿಎಂ ಮೋದಿ :
ಪ್ರಧಾನಿ ನರೇಂದ್ರ ಮೋದಿ (Narendra Modi) ಫೆಬ್ರವರಿ 25 ರಂದು ಪುದುಚೇರಿಗೆ ಭೇಟಿ ನೀಡಲಿದ್ದಾರೆ. ಪಿಎಂ ಮೋದಿ ಅವರು ಅದೇ ದಿನ ನೆರೆಯ ತಮಿಳುನಾಡಿನ ಕೊಯಮತ್ತೂರುಗೂ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಬುಧವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಪುದುಚೇರಿಗೆ ಭೇಟಿ ನೀಡಿದ್ದರು. ರಾಹುಲ್ ಇಲ್ಲಿನ ಸೊಲಾಯ್ ನಗರ ಪ್ರದೇಶದ ಮೀನುಗಾರಿಕೆ ಸಮುದಾಯದ ಮತ್ತು ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳನ್ನು ಭೇಟಿಯಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.