ಕೊಲ್ಕತ್ತಾ: ಪುಲ್ವಾಮಾ ಉಗ್ರ ದಾಳಿ ಹಿನ್ನೆಲೆಯಲ್ಲಿ ಪಾಕ್​ಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿರುವ ಭಾರತೀಯ ಚಹಾ ಮಾರಾಟಗಾರರ ಸಂಘಟನೆ (ಐಟಿಇಎ) ಪಾಕಿಸ್ತಾನಕ್ಕೆ ಚಹಾ ಸಾಗಣೆಯನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಟಿಇಎ ಅಧ್ಯಕ್ಷ ಅಂಶುಮಾನ್ ಕನೋರಿಯಾ ಭಾರತದ ರಫ್ತುದಾರರ ಸಂಸ್ಥೆ, ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಕ್ಕೆ ಬೆಂಬಲವಾಗಿ ನಿಲ್ಲಲು ಸಿದ್ಧವಿದ್ದು, ಭಾರತ ಸರ್ಕಾರ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರವನ್ನು ಬಂದ್ ಮಾಡಿದರೆ ಐಟಿಇಎ ಅದಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧವಿದೆ ಎಂದು ಹೇಳಿದ್ದಾರೆ.


ಭಾರತದ ಭದ್ರತೆ, ದೇಶದ ಸೈನಿಕರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ.  ವ್ಯಾಪಾರ ವಹಿವಾಟು ನಂತರದ್ದು ಎಂದು ಅಂಶುಮಾನ್ ಹೇಳಿದ್ದಾರೆ.


ಚಹಾ ಮಂಡಳಿ ಅಂಕಿ-ಅಂಶದ ಪ್ರಕಾರ 2018 ರಲ್ಲಿ ಪಾಕ್‌ಗೆ ಒಟ್ಟು 15.83 ಮಿಲಿಯನ್ ಕೆ.ಜಿ. ಚಹಾ ರಫ್ತಾಗಿ 154.71 ಕೋಟಿ ರೂ. ಮೌಲ್ಯದ ವಹಿವಾಟು ನಡೆದಿತ್ತು.