ನವದೆಹಲಿ: ಭಾನುವಾರ ಟ್ರಾಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಮುದಾಸಿರ್ ಅಹ್ಮದ್ ಖಾನ್ ಎನ್ನುವವನ್ನು ಹತ್ಯೆಗೈದಿವೆ ಎಂದು ಸೇನಾ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಲೆಫ್ಟನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಪುಲ್ವಾಮಾ ದಾಳಿಯ ಪ್ರಮುಖ ಸೂತ್ರದಾರ ಮುದಾಸಿರ್ ಖಾನ್ ಖಾನ್ರನ್ನು ಟ್ರಾಲ್ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿದೆ ಎಂದು ತಿಳಿಸಿದರು. ಮುದಾಸ್ಸಿರ್ ಪುಲ್ವಾಮಾ ಆತ್ಮಹತ್ಯಾ ಬಾಂಬರ್ ಆಗಿದ್ದ ಆದಿಲ್ ಅಹ್ಮದ್ ದಾರ್ಗೆ ಕಾರು ಮತ್ತು ಸ್ಫೋಟಕಗಳನ್ನು ನೀಡಿದ್ದರು. ಇದರಿಂದ ಕಾಶ್ಮೀರ ಕಣಿವೆಯಲ್ಲಿ ಹಲವು ಐಇಡಿ ಸ್ಪೋಟಗಳಿಗೆ ಕಾರಣವಾಗಿದ್ದರು.ಇದೇ ವೇಳೆ ಪುಲ್ವಾಮಾ ದಾಳಿಯ ನಂತರ ಒಟ್ಟು 18 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ.ಇದರಲ್ಲಿ 6  ಹಿರಿಯ ಜೈಶ್ ಎ ಮೊಹಮ್ಮದ್ ಸಂಘಟನೆ ಸದಸ್ಯರು ಹತ್ಯೆಯಾಗಿದ್ದಾರೆ ಎಂದು ತಿಳಿಸಿದರು.


"ಕಳೆದ 21 ದಿನಗಳಲ್ಲಿ ನಾವು 18 ಭಯೋತ್ಪಾದಕರನ್ನು ತೆಗೆದುಹಾಕಿದ್ದೇವೆ, ಅವುಗಳಲ್ಲಿ 14 ಜನ ಜೆಎಂನಿಂದ ಬಂದಿದ್ದು, 14ರಲ್ಲಿ 6 ಜನ ಮುಖ್ಯ ಕಮಾಂಡರ್ಗಳು, ಜೆಎಂನ 2 ನೇ ಕಮಾಂಡರ್ ಮುದಾಸಿರ್ ರನ್ನು ಹತ್ಯೆಗೈಯಲಾಗಿದೆ " ಎಂದು ಲೆಫ್ಟಿನೆಂಟ್ ಜನರಲ್ ಧಿಲ್ಲನ್ ಎಎನ್ಐಗೆ ತಿಳಿಸಿದರು. ಕಣಿವೆಯಲ್ಲಿನ ಎಲ್ಲ ಜೈಶ್ ಉಗ್ರರು ಹತ್ಯೆಯಾಗುವವರೆಗೆ ಸೇನಾ ಕಾರ್ಯಾಚರಣೆ ಮುಂದುವರೆಯಲಿದೆ ಎಂದರು.