ಶ್ರೀನಗರ: ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಹಿಂದೆ  ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹದ್ ಭಾಯಿ ಕೈವಾಡವಿದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಈತನ ಕೈವಾಡದಿಂದಲೇ 40ಕ್ಕೂ ಅಧಿಕ ಸಿಆರ್ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದರು ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅಧಿಕಾರಿಗಳು, 23 ವರ್ಷದ  ಎಲೆಕ್ಟ್ರಿಷಿಯನ್ ಖಾನ್ ಪುಲ್ವಾಮಾ ಜಿಲ್ಲೆಯವನಾಗಿದ್ದು ಜೈಶ್ ಆತ್ಮಹತ್ಯಾ ಬಾಂಬರ್ ದುರಂತದಲ್ಲಿ ಬಳಸಿದ ವಾಹನ ಮತ್ತು ಸ್ಫೋಟಕಗಳನ್ನು ಸಿದ್ದಪಡಿಸಲು ಅವನು ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಿದ್ದಾರೆ.


ಈ ವ್ಯಕ್ತಿ ಟ್ರಾಲ್ ಮಿರ್ ಮೊಹಲ್ಲಾ ನಿವಾಸಿಯಾಗಿದ್ದು, 2017 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿಗೆ ಸೇರ್ಪಡೆಯಾಗಿದ್ದಾನೆ. ಅನಂತರ ಅವನನ್ನು ನೂರ್ ಮೊಹಮ್ಮದ್ ಟ್ಯಾಂಟ್ರೆ, ಅಲಿಯಾಸ್ 'ನೂರ್ ಟ್ರ್ಯಾಲಿ', ಎನ್ನುವ ಉಗ್ರನು ಖಾನ್ ನನ್ನು ಜೆಎಂಗೆ ಸೇರಿಸಿದ್ದಾನೆ. ಈ ಹಿನ್ನಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಜೈಷ್ ಅನ್ನು ಪುನಶ್ಚೇತನಗೊಳಿಸಲು ಟ್ಯಾಂಟ್ರೆ ಪ್ರಮುಖ ಕಾರಣ ಎಂದು ನಂಬಲಾಗಿದೆ.


ಡಿಸೆಂಬರ್ 2017 ರಲ್ಲಿ ಎನ್ಕೌಂಟರ್ನಲ್ಲಿ ಟ್ಯಾಂಟ್ರೆಯವರು ಭದ್ರತಾ ಪಡೆಗಳಿಂದ ಹತ್ಯೆಯಾಗಿದ್ದಾನೆ. ಅವನ ಮರಣದ ನಂತರ ಖಾನ್ ಮನೆ ಬಿಟ್ಟು ಜನವರಿ 14, 2018 ರಂದು ಜೆಎಂನಲ್ಲಿ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಪ್ರಕಾರ ಫೆಬ್ರವರಿ 14 ರಂದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಗಾಡಿಯಲ್ಲಿ ಸ್ಫೋಟಕ-ಹೊತ್ತ ಕಾರು ಓಡಿಸಿದ್ದ ಆದಿಲ್ ಅಹ್ಮದ್ ದಾರ್ ಎನ್ನುವವನು ಖಾನ್ ಅವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ