ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ರಾಜೀನಾಮೆ ನೀಡಿದ ನಂತರ ಪಕ್ಷವು ಇನ್ನು ನೂತನ ಅಧ್ಯಕ್ಷರಿಗಾಗಿ ಹುಡುಕಾಟದಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ ಪುಣೆ ಮೂಲಕದ 28 ರ ಹರೆಯದ ಇಂಜನಿಯರ್ ತಾವು ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ತಾವು ವಹಿಸಲು ಸಿದ್ದ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗಜಾನಂದ್ ಹೊಸಳೆ ಎನ್ನುವ ಈ ವ್ಯಕ್ತಿ ಪುಣೆಯಯಲ್ಲಿ ಇಂಜನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈಗ ಕಾಂಗ್ರೆಸ್ ನ ಉನ್ನತ ಹುದ್ದೆಗೆ ನಾಮಪತ್ರ ಸಲ್ಲಿಸುವ ವಿಚಾರವಾಗಿ ಮಾತನಾಡಿ 'ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ವಿಚಾರದಲ್ಲಿ ಬದ್ದರಾಗಿರುವ ಹಿನ್ನಲ್ಲೆಯಲ್ಲಿ ಈಗ ಪಕ್ಷವು ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಬೇಕು ಎನ್ನುವ ಗೊಂದಲದಲ್ಲಿದೆ. ಇಂತಹ ಸಂದರ್ಭದಲ್ಲಿ ನಾನು ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುತ್ತೇನೆ ' ಎಂದು ಅವರು ಹೇಳಿದ್ದಾರೆ. ಜುಲೈ 23 ಕ್ಕೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಮೇಶ್ ಬಾಗ್ವೆ ಅವರಿಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.


'ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ತುರ್ತಾಗಿ ಆಗಬೇಕಾಗಿದೆ ಆದಕ್ಕೆ ಯುವ ನಾಯಕತ್ವದ ಅವಶ್ಯಕತೆ ಇದೆ, ರಾಹುಲ್ ಗಾಂಧಿ ಹೇಳಿದಂತೆ ಪಕ್ಷಕ್ಕೆ ಯುವ ನಾಯಕತ್ವದ ಅವಶ್ಯಕತೆ ಇದೆ. ಬರಿ ಅಷ್ಟೇ ಅಲ್ಲ ವಿಚಾರದಲ್ಲಿ ಹೃದಯ ವೈಶಾಲ್ಯದಲ್ಲಿ ಕೂಡ ಅವರು ಯುವಕ ರಾಗಿರಬೇಕಾಗಿದೆ' ಎಂದರು. 


ಯಾವುದಾದರು ಸಂಘಟನೆ ಅಥವಾ ಸಂಸ್ಥೆ ಜೊತೆ ತಾವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಿರಾ? ಎಂದು ಪ್ರಶ್ನಿಸಿದಾಗ ಅವರ ಉತ್ತರ ಇಲ್ಲ ಎನ್ನುವುದಕ್ಕಾಗಿತ್ತು. ಇದೇ ವೇಳೆ ಸಾಮಾನ್ಯ ಕಾರ್ಯಕರ್ತನಾಗಿ ತಾವೇಕೆ ಕಾರ್ಯನಿರ್ವಹಿಸಬಾರದು ಎಂದು ಹೊಸಲೇ ಅವರನ್ನು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಅವರು 'ಒಂದು ಅವಳೇ ಹಾಗೆ ಮಾಡಿದಲ್ಲಿ ತಮ್ಮನ್ನು ಕಡೆಗಣಿಸುವ ಸಾಧ್ಯತೆ ಅಧಿಕವಾಗಿರುತ್ತದೆ'ಎಂದು ತಿಳಿಸಿದರು.


ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೆ ಪಕ್ಷದಲ್ಲಿ ತರುವ ಬದಲಾವಣೆಗಳ ಬಗೆ ಸಂಕ್ಷಿಪ್ತ ವಿವರಣೆ ನೀಡಿದ ಗಜಾನಂದ್ ಹೊಸಲೇ 'ಪಕ್ಷದ ಅಧ್ಯಕ್ಷನಾಗಿ ಪ್ರಮುಖವಾಗಿ ಪಾರದರ್ಶಕತೆ ಹೆಚ್ಚಿನ ಆಧ್ಯತೆ ನೀಡುತ್ತೇನೆ.ಸದ್ಯ ಪಕ್ಷ ಎದುರಿಸುತ್ತಿರುವ ಸಮಸ್ಯೆಯಿಂದ ಮುಕ್ತಗೊಳಿಸುತ್ತೇನೆ, ಅದಕ್ಕೆ ನಾನು ಈಗಾಗಾಲೇ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದೇನೆ' ಎಂದರು.  ಕಾರ್ಲ್ ಮಾರ್ಕ್ಸ್ ಅಂಬೇಡ್ಕರ್, ಗಾಂಧಿ ಅವರ ವಿಚಾರದಾರೆಗಳಿಂದ ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.