ಪುಣೆ: ಪುಣೆ ನಿವಾಸಿ ಒಬ್ಬರು ಇತ್ತೀಚಿಗೆ ಪ್ರಧಾನಮಂತ್ರಿ ಕಚೇರಿಗೆ ಇಮೇಲ್ ಕಳುಹಿಸಿದ್ದಾರೆ. ಅದರಲ್ಲಿ ಅವರು 'ತಮ್ಮ ಮನೆ ಮುಂದೆ ಏಲಿಯನ್ ರೀತಿ ಏನನ್ನೋ ಕಂಡೆ' ಎಂದು ಹೇಳಿದ್ದಾರೆ. ಇದರ ನಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹಿಂದುಸ್ತಾನ್ ಟೈಮ್ಸ್ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಪ್ರಧಾನಮಂತ್ರಿಯಿಂದ ಈ ಬಗ್ಗೆ ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದು ಈ ವಿಷಯವನ್ನು ತನಿಖೆ ಮಾಡಲು ಕೇಳಿಕೊಂಡಿದ್ದಾರೆ ಎಂದು ಸಿಂಹಗದ್ ರೋಡ್ ಪೊಲೀಸ್ ಠಾಣೆಗೆ ಸಂಬಂಧಪಟ್ಟ ಅಧಿಕೃತ ಅಧಿಕಾರಿ ಈ ಮಾಹಿತಿಯನ್ನು ನೀಡಿದರು.


ಅಧಿಕೃತ ಮಾಹಿತಿ ಪ್ರಕಾರ, ಕೆಲವು ಸಮಯದ ಹಿಂದೆ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ತನಿಖೆಯಲ್ಲಿ ಈ 47 ವರ್ಷದ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥ ಎಂದು ಬಹಿರಂಗಗೊಂಡಿದೆ. ಈ ವ್ಯಕ್ತಿಯು ಕೆಲವು ವರ್ಷಗಳ ಹಿಂದೆ ಮಿದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದಾನೆ ಮತ್ತು ನಂತರ ಆತ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಕೆಲವು ತಿಂಗಳುಗಳ ಹಿಂದೆ, ತನ್ನ ಬಂಗಲೆಯ ಹೊರಗೆ ಮರಗಳಲ್ಲಿ ಬೆಳಕನ್ನು ನೋಡಿದಾಗ, ಇದು ಏಲಿಯನ್ ತರಹ ಕಂಡು ಬಂದಿದೆ ಎಂದು ಭಾವಿಸಿದೆ ಎಂದು ಆತ ಹೇಳಿದ್ದಾರೆ.



ಈ ವ್ಯಕ್ತಿಯು "ಏಲಿಯನ್" ಭೂಮಿಯನ್ನು ಪ್ರವೇಶಿಸಿರಬಹುದು ಎಂದು ಭಾವಿಸಿದ್ದು, ಅದರ ಗ್ರಹಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲು ಪಿಎಂಒಗೆ ಇಮೇಲ್ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಈ ವ್ಯಕ್ತಿ ಕುಟುಂಬದವರಿಗೂ ಸಹ ಪಿಎಂಒಗೆ ಬರೆದ ಇಮೇಲ್ ಬಗ್ಗೆ ತಿಳಿಸಿಲ್ಲ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.