ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಶಿಮ್ಲಾದಲ್ಲಿ ಬಂಧನಕ್ಕೊಳಗಾಗಿದ್ದ ಫಿರೋಜ್ ಪುರದ ರೈತ, ತಾನು ಈ ಹಿಂದೆ ಮೋದಿ ಅವರ ತಾಯಿಗೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೃಷಿ ಕಾಯ್ದೆಯನ್ನು ಹಿಂಪಡೆಯುವುದಕ್ಕೆ ಬಂಧನಕ್ಕೊಳಗಾಗಿದ್ದ ರೈತ(Farmer) ಹರ್ಪ್ರೀತ್ ಸಿಂಗ್ ಮೋದಿ ಅವರ ತಾಯಿಯ ಸಹಾಯ ಪಡೆಯಲು ಮುಂದಾಗಿದ್ದರು. ಇದಕ್ಕಾಗಿ ಮೋದಿ ಅವರ ತಾಯಿಗೆ ಪತ್ರ ಬರೆದಿದ್ದ ಹರ್ ಪ್ರೀತ್ ಸಿಂಗ್, ನಿಮ್ಮ ಮಾತನ್ನು ಮೋದಿ ಕೇಳುತ್ತಾರೆ. ಯಾವುದೇ ಮಗ ತಾಯಿಯ ಮಾತನ್ನು ಮೀರುವುದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.


Amit Shah: ಕೇಂದ್ರ ಸರ್ಕಾರದಿಂದ 'ದೇಶ ಕಾಯೋ'ಯೋಧರಿಗೆ 'ಭರ್ಜರಿ ಗುಡ್ ನ್ಯೂಸ್'...!


ಪ್ರೀತಿಯ ತಾಯಿ, ದೇಶದ ಪ್ರಧಾನಿಗಳು ನಿಮ್ಮ ಮಗ, ನನ್ನ ಪ್ರಕಾರ ಅವರು ನಿಮ್ಮ ಮಾತನ್ನು ಉಲ್ಲಂಘಿಸುವುದಿಲ್ಲ. ಚಳಿಯಲ್ಲಿ ಗಡಿ ಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ನೀವು ಸಹಾಯ ಮಾಡಿ ಎಂದು ಪತ್ರದಲ್ಲಿ ಹರ್ಪ್ರೀತ್ ಸಿಂಗ್ ತಿಳಿಸಿದ್ದಾರೆ.


Aadhaar Card Photo Update - ಈ ಎರಡು ವಿಧಾನಗಳಿಂದ Aadhaar Cardನಲ್ಲಿನ ಭಾವಚಿತ್ರ ಬದಲಾಯಿಸಿ


ಈ ಪತ್ರವನ್ನು ಶೀಘ್ರವೇ ಮೋದಿ ಅವರ ತಾಯಿಗೆ ಕಳಿಸುವುದಾಗಿ ಹರ್ಪ್ರೀತ್ ಸಿಂಗ್ ಹೇಳಿದ್ದಾರೆ. ನೆನ್ನೆ ನಡೆದಿದ್ದ ಕೇಂದ್ರ ಸರ್ಕಾರ-ರೈತರ ನಡುವಿನ 11 ನೇ ಸುತ್ತಿನ ಮಾತುಕತೆಯೂ ವಿಫಲವಾಗಿತ್ತು.


ಕೊರೋನಾ ಕಾರಣಕ್ಕೆ ಈ‌ ಬಾರಿ ದೆಹಲಿ ರಾಜಪಥದಲ್ಲಿ ಯಾವ ರೀತಿಯ ನಡೆಯಲಿದೆ Republic Day Parade


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.