ರೈತರ ಪ್ರತಿಭಟನೆ ನಡುವೆ ಪಂಜಾಬ್-ಹರಿಯಾಣ ಸಿಎಂ ಟ್ವಿಟ್ಟರ್ ವಾರ್, ಯಾರು ಏನು ಹೇಳಿದರು?
ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡುವೆ ಟ್ವಿಟರ್ ವಾರ್ ಮುಂದುವರೆದಿದೆ.
ನವದೆಹಲಿ: ಪಂಜಾಬ್-ಹರಿಯಾಣ ರೈತರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ "ದೆಹಲಿ ಚಲೋ" ಕೈಗೊಂಡಿದ್ದಾರೆ. ಆದರೆ ಹರಿಯಾಣದಲ್ಲಿಯೇ ರೈತರನ್ನು ತಡೆಯಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ದೆಹಲಿಯ ಗಡಿಯಲ್ಲಿ ಹೆಚ್ಚಿನ ಪ್ರಮಾಣದ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡುವೆ ಟ್ವಿಟ್ಟರ್ ವಾರ್ ನಡೆದಿದೆ.
ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ :
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amrinder Singh) ಅವರು ಹರಿಯಾಣದಲ್ಲಿ ರೈತರನ್ನು ತಡೆಯುವ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡುವ ಮೂಲಕ ಹರಿಯಾಣ ಪೊಲೀಸ್ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು ರೈತರ ವಿರುದ್ಧ ಬಲ ಪ್ರಯೋಗ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ಎಂದು ಹೇಳಿದ್ದಾರೆ.
ಟ್ವೀಟ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಎಂಎಸ್‌ಪಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ನಾನು ರಾಜಕೀಯವನ್ನು ತೊರೆಯುತ್ತೇನೆ. ಆದ್ದರಿಂದ, ದಯವಿಟ್ಟು ಮುಗ್ಧ ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.
ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ
ಅಮರೀಂದರ್ ಸಿಂಗ್ ಮಾಡಿದ ಟ್ವೀಟ್‌ಗೆ ಮನೋಹರ್ ಲಾಲ್ ಖಟ್ಟರ್ ಕೂಡ ಪ್ರತಿಕ್ರಿಯಿಸಿದ್ದು ಪಂಜಾಬ್ (Punjab) ಸಿಎಂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜಿ, ನಾನು ಈಗಾಗಲೇ ಹೇಳಿದ್ದೇನೆ ಮತ್ತು ನಾನು ಮತ್ತೆ ಹೇಳುತ್ತಿದ್ದೇನೆ, ಎಂಎಸ್‌ಪಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ನಾನು ರಾಜಕೀಯವನ್ನು ತೊರೆಯುತ್ತೇನೆ. ಆದ್ದರಿಂದ ದಯವಿಟ್ಟು ಮುಗ್ಧ ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ಬರೆದಿದ್ದಾರೆ.
Farmers) ಸಮಸ್ಯೆಗಳ ಬಗ್ಗೆ ನೀವು ತುಂಬಾ ಗಂಭೀರವಾಗಿರುವಿರಾ? ನೀವು ಕೇವಲ ಟ್ವೀಟ್ ಮಾಡುತ್ತಿದ್ದೀರಿ. ಆದರೆ ಮಾತುಕತೆಯನ್ನು ಏಕೆ ತಪ್ಪಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಮುಂದಿನ ಟ್ವೀಟ್‌ನಲ್ಲಿ, ನಿಮ್ಮ ಸುಳ್ಳು, ವಂಚನೆ ಮತ್ತು ಪ್ರಚಾರದ ಸಮಯ ಮುಗಿದಿದೆ. ನಿಮ್ಮ ನೈಜ ಮುಖವನ್ನು ಜನರು ನೋಡಲಿ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಜನರ ಜೀವಕ್ಕೆ ಅಪಾಯವಾಗುವುದನ್ನು ದಯವಿಟ್ಟು ನಿಲ್ಲಿಸಿ. ಜನರ ಜೀವನದೊಂದಿಗೆ ಆಟವಾಡದಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಸಾಂಕ್ರಾಮಿಕ ಸಮಯದಲ್ಲಿಯೂ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.
MSP) ಬಗ್ಗೆ ಮನವರಿಕೆ ಆಗಬೇಕಿರುವುದು ರೈತರು, ನಾನಲ್ಲ. ಅವರ 'ದೆಹಲಿ ಚಲೋ'ಗೆ ಮುಂಚಿತವಾಗಿ ನೀವು ಅವರೊಂದಿಗೆ ಮಾತನಾಡಲು ಪ್ರಯತ್ನಿಸಬೇಕಿತ್ತು. ನಾನು ರೈತರನ್ನು ಪ್ರಚೋದಿಸುತ್ತಿದ್ದೇನೆ ಎಂದು ನೀವು ಭಾವಿಸುವುದಾದರೆ ಹರಿಯಾಣದ ರೈತರು ಕೂಡ ಏಕೆ ದೆಹಲಿಯತ್ತ ತೆರಳುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಸಹಕಾರ ಸಂಘಗಳ ಮೂಲಕ ಜೂನ್ ಒಳಗೆ 5 ಸಾವಿರ ಉದ್ಯೋಗ ನಿರ್ಮಾಣ: ಎಸ್.ಟಿ. ಸೋಮಶೇಖರ್