ಉತ್ತರಾಖಂಡ : ಉತ್ತರಾಖಂಡ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ಪುಷ್ಕರ್ ಸಿಂಗ್ ಧಮಿ ಅಧಿಕಾರ ಸ್ವೀಕರಿಸಿದ್ದಾರೆ.


COMMERCIAL BREAK
SCROLL TO CONTINUE READING

ಪುಷ್ಕರ್ ಸಿಂಗ್ ಧಮಿ(Pushkar Singh Dhami) ಕಾಟಿಮಾ ಕ್ಷೇತ್ರದಿಂದ ಎರಡು ಶಾಸಕರಾಗಿದ್ದರೂ, ಅಲ್ಲದೆ, ರಾಜ್ಯ ಸರ್ಕಾರದಲ್ಲಿ ಸಚಿವರಾಗಿರಲಿಲ್ಲ ಆದರೆ, ಧಮಿ ಉತ್ತರಾಖಂಡ ರಾಜ್ಯದ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿದ್ದಾರೆ.


ಭಾರತೀಯ ವೈದ್ಯಕೀಯ ಸಮುದಾಯಕ್ಕೆ ಭಾರತ ರತ್ನ ನೀಡಲು ಕೇಜ್ರಿವಾಲ್ ಆಗ್ರಹ


ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ 3ನೇ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿರುವ ಧಮಿ, ಶನಿವಾರ ಉತ್ತರಾಖಂಡ ರಾಜ್ಯದ ಬಿಜೆಪಿ(BJP) ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಆಯ್ಕೆಯಾಗಿದ್ದರು.


ಇದನ್ನೂ ಓದಿ : 20 ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ಸಿಗುತ್ತೆ ಭರ್ಜರಿ ಝಣ ಝಣ ಕಾಂಚಾಣ..!


ಮಾಜಿ ಸೈನಿಕನ ಮಗನಾಗಿರುವ ಪುಷ್ಕರ್ ಸಿಂಗ್ ಧಮಿ, ಕಾನೂನು ವಿಷಯದಲ್ಲಿ ಪದವಿ ಪೂರೈಸಿದ್ದು, ಆರ್ ಎಸ್ ಎಸ್(RSS Workers) ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಉತ್ತರಾಖಂಡ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ 2002 ಮತ್ತು 2008ರಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ : PM Jan Dhan Account : ಜನ ಧನ್ ಖಾತೆದಾರರಿಗೆ ಸಿಹಿ ಸುದ್ದಿ : ಖಾತೆದಾರರಿಗೆ ಸಿಗಲಿದೆ 1.3 ಲಕ್ಷ ರೂ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.