ಶ್ರೀರಾಮ ಮಾಂಸಹಾರಿ ಎಂಬ ಅಪಪ್ರಚಾರ ಕೈ ಬಿಡಿ- ಇದು ದೇಶದ ರಾಮ ಭಕ್ತರಿಗೆ ಆತಂಕ ಉಂಟುಮಾಡುವ ಉದ್ದೇಶ: ಗುರೂಜಿ ರಿತೇಶ್ವರ್ ಜೀ ಮಹಾರಾಜ್
ರಾಮಮಂದಿರದ ನಂತರ ಇದೀಗ ಕೃಷ್ಣಮಂದಿರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದ್ದು, ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ ಎಂದು ಉತ್ತರ ಪ್ರದೇಶದ ಆನಂದಧಾಮ್ ಪೀಠದ ಧಾರ್ಮಿಕ ಶಿಕ್ಷಕ ಮತ್ತು ಗುರೂಜಿ ರಿತೇಶ್ವರ್ ಜೀ ಮಹಾರಾಜ್ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ಇಡೀ ದೇಶ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ ಶ್ರೀರಾಮಚಂದ್ರ ಮಾಂಸಹಾರಿ ಸೇರಿದಂತೆ ವಿವಿಧ ರೀತಿಯಲ್ಲಿ ಅಪ ಪ್ರಚಾರ ಮಾಡುತ್ತಿರುವುದನ್ನು ಕೈಬಿಡಬೇಕು ಎಂದು ಉತ್ತರ ಪ್ರದೇಶದ ಆನಂದಧಾಮ್ ಪೀಠದ ಧಾರ್ಮಿಕ ಶಿಕ್ಷಕ ಮತ್ತು ಗುರೂಜಿ ರಿತೇಶ್ವರ್ ಜೀ ಮಹಾರಾಜ್ ಹೇಳಿದ್ದಾರೆ.
ರಾಮಮಂದಿರದ ನಂತರ ಇದೀಗ ಕೃಷ್ಣಮಂದಿರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದ್ದು, ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ- ರಾಮಮಂದಿರಕ್ಕೆ 613 ಕೆ.ಜಿ ತೂಕದ ಗಂಟೆ ಸಮರ್ಪಿಸಿದ ಕನ್ನಿಮೋಳಿ ಕುಟುಂಬ
ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಆನಂದಧಾಮ್ ಪೀಠದ ಧಾರ್ಮಿಕ ಶಿಕ್ಷಕ ಮತ್ತು ಗುರೂಜಿ ರಿತೇಶ್ವರ್ ಜೀ ಮಹಾರಾಜ್, ದೇಶದಲ್ಲಿ ಹಲವು ಹಂತಗಳ ಚುನಾವಣೆಗಳು ನಿರಂತರವಾಗಿ ನಡೆಯತ್ತವೆ. ಇದೇ ರೀತಿ ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯೂ ಎದುರಾಗಲಿದೆ. ಇದು ಕೂಡ ಉತ್ತಮ ಬೆಳವಣಿಗೆಯಲ್ಲವೇ?. ರಾಷ್ಟ್ರ ವಾದ, ಸಾಂಸ್ಕೃತಿಕ ಮೌಲ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ ಅವರು, ರಾಮಮಂದಿರ ಈ ದೇಶದ ಆತ್ಮ. ರಾಜಕೀಯ ಪಕ್ಷಗಳು ಯಾಕೆ ಚುನಾವಣೆಗೆ ಹೆದರಿಕೊಂಡಿವೆ. ರಾಮಮಂದಿರದಿಂದಾಗಿ ಉತ್ತರ ಪ್ರದೇಶ ರಾಜ್ಯದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗುತ್ತಿವೆ. ಶ್ರೀ ರಾಮಮಂದಿರದಿಂದ ಏಕತೆ ಮೂಡಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಆದರೆ ದೇಶದ ಹಲವೆಡೆ ರಾಮನ ಕುರಿತು ಹಲವು ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿದ್ದು, ಇದರಿಂದ ರಾಮಭಕ್ತರಿಗೆ ಆಘಾತ ಉಂಟಾಗಿದೆ. ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಸನಾತನ ಧರ್ಮ ಶ್ರೀರಾಮಚಂದ್ರನ ಆದರ್ಶಗಳಿಂದ ತುಂಬಿದೆ. ರಾಮಾಯಣದ ಸಂದರ್ಭದಲ್ಲೂ ಅಸುರರಂತೆ ಕೆಲಸ ಮಾಡಿದ್ದ ಸಂತತಿ ಈಗಲೂ ಮುಂದುವರೆದಿದೆ. ಇಂತಹ ಟೀಕೆ, ಟಿಪ್ಪಣಿಗಳನ್ನು ಕೈಬಿಟ್ಟು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದವರು ಕರೆ ನೀಡಿದರು.
ಇದನ್ನೂ ಓದಿ- Ayodhya Trains: ಅಯೋಧ್ಯೆ ರಾಮಮಂದಿರ ಭೇಟಿಗಾಗಿ ಯೋಜಿಸುತ್ತಿರುವವರಿಗೆ ಗುಡ್ ನ್ಯೂಸ್
ಇದು ಕೇವಲ ರಾಮಮಂದಿರವಲ್ಲ, ರಾಷ್ಟ್ರಮಂದಿರ ಮತ್ತು ವಿಶ್ವ ಮಂದಿರವಾಗಿದೆ. ಇದು ಎಲ್ಲರನ್ನು ಒಳಗೊಳ್ಳುವ ಮಂದಿರವಾಗಿದೆ. ಪ್ರತಿಯೊಬ್ಬರಿಗೂ ಮಂದಿರ ಉದ್ಘಾಟನೆಗೆ ಆಹ್ವಾನವಿದೆ. ಹೆಚ್ಚಿನ ಪ್ರಮಾಣದ ಮುಸ್ಲೀಂ ಸಮುದಾಯದ ಜನ, ಸಾಹಿತಿಗಳು ಕೂಡ ಮಂದಿರ ನಿರ್ಮಾಣವನ್ನು ಸ್ವಾಗತಿಸಿದ್ದಾರೆ. ಕವಿತೆ, ಲೇಖನ ಬರೆದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯೇತರ ಸಮಾರಂಭ. ದೇಶ – ವಿದೇಶಗಳ ಜನತೆ ಮಂದಿರ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ರಾಮ ಮಂದಿರ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.