ನವದೆಹಲಿ: ರಾಫೆಲ್ ಫೈಟರ್ ಜೆಟ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸದಿರುವ ಕೇಂದ್ರ ಸರ್ಕಾರದ ನಿರ್ಧಾರವು ಹಗರಣ ನಡೆದ ಸಂಶಯದಂತೆ ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ರವರು ಈ ಒಪ್ಪಂದ ಕುರಿತಾದ ವಿವರಣೆ ನೀಡಲು ನಿರಾಕರಿಸಿದ ಬಳಿಕ ರಾಹುಲ್ ಹೇಳಿಕೆ ಬಂದಿದೆ


COMMERCIAL BREAK
SCROLL TO CONTINUE READING

ಮಾಧ್ಯಮಗಳಿಗೆ ಮಾತನಾಡಿದ ರಾಹುಲ್ ಗಾಂಧಿ ರಾಫೆಲ್ ವಿಮಾನಗಳ ಖರೀದಿಗೆ ಹಣ ಪಾವತಿಸುವ ಮೊತ್ತವನ್ನು ಬಹಿರಂಗಪಡಿಸುವುದಿಲ್ಲವೆಂದು ರಕ್ಷಣಾ ಸಚಿವರು ಹೇಳಿದ್ದಾರೆ.ಆ ಮೂಲಕ ಇದರಲ್ಲಿ ಹಗರಣ ನಡೆದಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಒಪ್ಪಂದದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಪ್ಯಾರಿಸ ಗೆ ತೆರಳಿ ಒಪ್ಪಂದವನ್ನು ಮಾಡಿಕೊಂದಿರುವುದರ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆ ಎಂದು ರಾಹುಲ್ ತಿಳಿಸಿದರು.



ಈ ಕುರಿತಾಗಿ ಟ್ವೀಟ್ ಸಹಿತ ಮಾಡಿರುವ ಅವರು ಪ್ರಧಾನಿ ಮೋದಿ ಮತ್ತು ಅವರ "ವಿಶ್ವಾಸಾರ್ಹ" ಸ್ನೇಹಿತರ ಮೂಲಕ ರಾಫೆಲ್ ಜೆಟ್ ನ  ಬೆಲೆಯ ಮಾತುಕತೆ ನಡೆಸಲಾಗಿದೆ ಎಂದು ರಾಹುಲ್ ಹೇಳಿದರು. ಈ ರಾಫೆಲ್ ಒಪ್ಪಂದ "ಬೆಲೆ ಬಗ್ಗೆ ಸಂಸತ್ತಿಗೆ ತಿಳಿಸುವುದು ರಾಷ್ಟ್ರೀಯ ಭದ್ರತೆ ಅಪಾಯ ಮತ್ತು ಈ ಬಗ್ಗೆ ಕೇಳಿದವರೆಲ್ಲರನ್ನು 'ರಾಷ್ಟ್ರ-ವಿರೋಧಿಗಳೆನ್ನುವ ಪಟ್ಟವನ್ನು ಕಟ್ಟಲಾಗುತ್ತದೆ  ಎಂದು ರಾಹುಲ್  ತಮ್ಮ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.