ಅಹ್ಮದಾಬಾದ್: ಗುಜರಾತ್ ಚುನಾವಣೆಗೆ ಸಮಯ ಎರಡು ವಾರಗಳಿಗಿಂತಲೂ ಕಡಿಮೆಯಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಬುಧವಾರದಿಂದ ಎರಡು ದಿನದ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಬಾರಿ ಹೇಗಾದರೂ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ನಿರ್ಧರಿಸುವ ರಾಹುಲ್ ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಎರಡು ದಿನಗಳ ಪ್ರಚಾರ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇದೇ ಸಮಯದಲ್ಲಿ ಅವರು ಅಮ್ರೆಲಿ ಮತ್ತು ಭಾವನಗರ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ರಾಹುಲ್ ಜನರೊಂದಿಗೆ ಸಂವಹನ ನಡೆಸುತ್ತಾರಲ್ಲದೇ, ಸಾರ್ವಜನಿಕ ಸಭೆಗಳಲ್ಲೂ ಪಾಲ್ಗೊಳ್ಳುತ್ತಾರೆ. 


ರಾಹುಲ್ ತಮ್ಮ ಎರಡನೇ ದಿನದ ಪ್ರಚಾರ ಸಮಯದಲ್ಲಿ ಹಲವು ರ್ಯಾಲಿಗಳನ್ನು ಕೈಗೊಳ್ಳಲಿದ್ದಾರೆ. ಜೊತೆಗೆ ಲತಿಯಲ್ಲಿ ಸಾರ್ವಜನಿಕ ಸಭೆಯನ್ನೂ ನಡೆಸುತ್ತಾರೆ. ನಂತರ ಧಾಸ, ಗಧಡ, ಬರ್ವಲ ಮತ್ತು ವಲ್ಲಭಿಪುರ್ ನಗರಗಳಿಗೆ ಭೇಟಿ ನೀಡಲಿದ್ದಾರೆ. ಭಾವನಗರ್ನಲ್ಲಿರುವ ನಾರಿ ಚೊಕ್ಡಿ ಪ್ರದೇಶದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯೊಂದಿಗೆ ರಾಹುಲ್ ಪ್ರಚಾರ ಪೂರ್ಣಗೊಳ್ಳಲಿದೆ.


ಅಕ್ಟೋಬರ್ 24 ರಂದು ಗುಜರಾತ್ ಚುನಾವಣಾ ದಿನಾಂಕ ಘೋಷಣೆಯಾದ ನಂತರ ರಾಜ್ಯಕ್ಕೆ ರಾಹುಲ್ ನೀಡುತ್ತಿರುವ ಆರನೇ ಭೇಟಿ ಇದಾಗಿದೆ. ಡಿ.9 ಮತ್ತು ಡಿ.14 ಎರಡು ಹಂತಗಳಲ್ಲಿ ಗುಜರಾತ್ನಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯ ಫಲಿತಾಂಶ ಡಿ. 18ರಂದು ಹೊರಬೀಳಲಿದೆ.