ನವದೆಹಲಿ: 'ಚೌಕಿದಾರ್ ಚೋರ್ ಹೈ' ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಬಲಗೊಳ್ಳುವ ಸೂಚನೆ ಅರಿತ ಬಳಿಕ ಸುಪ್ರೀಂ ಕೋರ್ಟ್ ಕ್ಷಮೆ ಕೋರುವುದಾಗಿ ಮಂಗಳವಾರ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಮೂರು ತಪ್ಪುಗಳಿದ್ದವು. ಹೀಗಾಗಿ ರಾಹುಲ್ ಗಾಂಧಿ ಮೇ 6ರೊಳಗೆ ಮತ್ತೊಂದು ಅಫಿಡವಿಟ್ ಸಲ್ಲಿಸಲಿದ್ದು, ಅದರಲ್ಲಿ ಕ್ಷಮಾಪಣೆ ಕೋರಲಿದ್ದಾರೆ ಎಂದು ರಾಹುಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.


"ಹಳೆ ಅಫಿಡವಿಟ್​ನಲ್ಲಿ ವಿಷಾದ(Regret) ಎಂದು ಹೇಳಲಾಗಿದೆ. ಇದನ್ನು ನಾನು ಡಿಕ್ಷನರಿಯಲ್ಲೂ ಪರಿಶೀಲಿಸಿದ್ದೇನೆ. ರಿಗ್ರೆಟ್​ ಪದಕ್ಕೆ ಕ್ಷಮಾಪಣೆ ಎಂಬ ಅರ್ಥವೂ ಇದೆ. ಆದರೂ ಮತ್ತೊಮ್ಮೆ ಕ್ಷಮಾಪಣೆ (apology)ಕೋರಿ ಅಫಿಡವಿಟ್ ಸಲ್ಲಿಸಲಾಗುವುದು," ಎಂದು ತಿಳಿಸಿದರು.


ಈ ಹಿಂದೆ ರಾಹುಲ್ ಗಾಂಧಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ರಾಹುಲ್ ಗಾಂಧಿ ಕೇವಲ ವಿಷಾದ ವ್ಯಕ್ತಪಡಿಸಿದ್ದಾರೆಯೇ ಹೊರತು ಕ್ಷಮೆ ಕೇಳಿಲ್ಲ ಎಂದು ಬಿಜೆಪಿ ಆರೋಪಿಸಿತ್ತು.