ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರದಂದು ರಫೇಲ್ ಪ್ರಕರಣದ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ನೀಡಿದ ಚೌಕಿದಾರ್ ಚೌರ್ ಹೈ ಹೇಳಿಕೆಗೆ ಈಗ ಸುಪ್ರೀಂಕೋರ್ಟ್ ಎದುರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಈಗ ಹೊಸದಾಗಿ ಸಲ್ಲಿಸಿರುವ ಅಫಿದಾವಿತ್ತನಲ್ಲಿ ಮೀನಾಕ್ಷಿ ಲೇಖಿ ದೂರಿಗೆ ಮುಕ್ತಿ ಹಾಡುವಂತೆ ರಾಹುಲ್ ಮನವಿ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಏಪ್ರಿಲ್ 30 ರಂದು ಕಾಂಗ್ರೆಸ್ ಮುಖ್ಯಸ್ಥ  ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಹೇಳಿಕೆಯನ್ನು ತಪ್ಪಾಗಿ ಆರೋಪಿಸಿದ್ದಕ್ಕಾಗಿ ಅಫಿದಾವಿತ್ ನಲ್ಲಿ ಕ್ಷಮೆ ಯಾಚಿಸುವ ಭರವಸೆ ನೀಡಿದ್ದರು.


ಈಗ ಸುಪ್ರೀಂ ಗೆ ಸಲ್ಲಿಸಿರುವ ಹೊಸ ಅಫಿಡವಿಟ್ ನಲ್ಲಿ "ರಾಹುಲ್ ಗಾಂಧಿ ಈ ಗೌರವಾನ್ವಿತ ನ್ಯಾಯಾಲಯಕ್ಕೆ ತಪ್ಪಾದ ಆರೋಪಗಳಿಗೆ ಬೇಷರತ್ತಾಗಿ ಕ್ಷಮೆ ಯಾಚಿಸುತ್ತಾರೆ.ಇಂತಹ ಆರೋಪಗಳು ಸಂಪೂರ್ಣವಾಗಿ ಉದ್ದೇಶಪೂರ್ವಕವಲ್ಲದ, ಮತ್ತು ಅಜಾಗರೂಕರಾಗಿವೆಯೆಂದು" ಅಫಿಡವಿಟ್ ಹೇಳಿದೆ. 


ಇನ್ನು ರಾಹುಲ್ ಗಾಂಧಿ ಸಹ ಇದಕ್ಕೆ ಪ್ರತಿಕ್ರಿಯಿಸಿ ನ್ಯಾಯಾಲದ ಮೇಲೆ ತಾವು ಅತ್ಯುನ್ನತ ಗೌರವವನ್ನು ಹೊಂದಿದ್ದು ನ್ಯಾಯದ ಆಡಳಿತದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಯಾವುದೇ ಕ್ರಮವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾಡಲು ತಾವು ಬಯಸಿಲ್ಲ " ಎಂದು ಹೇಳಿದರು.


ಇತ್ತೀಚಿಗೆ ಖಾಸಗಿ ಚಾನಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ " ನರೇಂದ್ರ ಮೋದಿಗೆ ಯಾವುದೇ ಕ್ಷಮೆ ಕೋರುವುದಿಲ್ಲ , ಏಕೆಂದರೆ ನಾನು ಸುಪ್ರೀಂಕೋರ್ಟ್ ಚೌಕಿದಾರ್ ಚೋರ್ ಹೈ ಎಂದು ತಪ್ಪಾಗಿ ಹೇಳಿದೆ.ಆದರೆ ನಾನು ಮೋದಿಗೆ ಚೌಕಿದಾರ್ ಚೋರ್ ಎಂದು ಹೇಳಲು ಕ್ಷಮೆಯಾಚಿಸುವುದಿಲ್ಲ"  ಎಂದು ಹೇಳಿದ್ದರು.