ರಕ್ತದಾನ ಮಾಡಲು ಯುವಜನತೆಗೆ ರಾಹುಲ್ ಗಾಂಧಿ ಕರೆ
ವಿಶ್ವ ರಕ್ತದಾನ ದಿನದಂದು ನಾನು ಎಲ್ಲಾ ರಕ್ತದಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ: ವಿಶ್ವ ರಕ್ತದಾನ ದಿನದ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಕ್ತದಾನ ಮಾಡುವಂತೆ ಯುವ ಸ್ನೇಹಿತರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅಗತ್ಯ ಇರುವವರಿಗೆ ರಕ್ತದಾನ ಮಾಡಿದರೆ ಅದು ಅವರ ಜೀವವನ್ನೇ ಉಳಿಸುತ್ತದೆ. ವಿಶ್ವ ರಕ್ತದಾನ ದಿನದಂದು ನಾನು ಎಲ್ಲಾ ರಕ್ತದಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ, ರಕ್ತದಾನ ಮಾಡಲು ಅವಕಾಶ ದೊರೆತರೆ, ಯಾರಿಗಾದರೂ ರಕ್ತದ ಅಗತ್ಯವಿದ್ದರೆ, ಯುವಸ್ನೇಹಿತರು ರಕ್ತದಾನ ಮಾಡಿ ಎಂದು ಯುವ ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ" ಎಂದಿದ್ದಾರೆ.
2004ರಲ್ಲಿ ಆರಂಭವಾದ ವಿಶ್ವ ರಕ್ತದಾನ ದಿನವನ್ನು ಪ್ರತಿ ವರ್ಷ ಜೂನ್ 15ರಂದು ಆಚರಿಸಲಾಗುತ್ತದೆ. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಹಲವು ಸಂಘಟನೆಗಳು ಇಂದು ಉಚಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಜನರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.