ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ  ಬಿಜೆಪಿ ಭರ್ಜರಿ ಜಯ ಸಾಧಿಸಿರುವುದಕ್ಕೆ ಪ್ರತಿಕ್ರಯಿಸಿರುವ ಉತ್ತರ ಪ್ರದೇಶದ ಯೋಗಿ ಆಧಿತ್ಯನಾಥ  ಕಾಂಗ್ರೆಸ್ಸ್ ಪಕ್ಷದಲ್ಲಿ ಬದಲಾಗಿರುವ ಪಕ್ಷದ ನಾಯಕತ್ವ ನಿಜವಾಗಿಯೂ ಬಿಜೆಪಿಗೆ ಶುಭ ಸೂಚನೆಯನ್ನು ನೀಡಿದೆ ಎಂದರು.


COMMERCIAL BREAK
SCROLL TO CONTINUE READING

ಯೋಗಿ ಅದಿತ್ಯನಾಥ ಇನ್ನು ಮುಂದುವರೆದು  ಗುಜರಾತಿನ ಜನ ಕಾಂಗ್ರೆಸಿನ ಒಡೆದಾಳುವ ನೀತಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಗುಜರಾತ್ ಮತ್ತು ಹಿಮಾಚಲದಲ್ಲಿ ಬಿಜೆಪಿಗೆ ದೊರಕಿರುವ ಗೆಲುವು ಪಕ್ಷದ ನಾಯಕತ್ವ ಮತ್ತು ಕಾರ್ಯಕರ್ತರ ಶ್ರಮದಿಂದ ದೊರಕಿದ ಗೆಲುವಾಗಿದೆ ಎಂದರು.


ಇದೆ ಸಂದರ್ಭದಲ್ಲಿ  ಸ್ಮೃತಿ ಇರಾನಿ ಮಾತನಾಡಿ  ರಾಹುಲ್ ಗಾಂಧೀ ದೇವರನ್ನು ಮೋಸಗೊಳಿಸಲು ಪ್ರಯತ್ನಿಸಿದ ಆದರೆ ಅದರ ಬದಲಾಗಿ ಅವರೇ ಮೊಸಹೊಗಿದ್ದಾರೆ ಎಂದು ವ್ಯಂಗವಾಡಿದ್ದಾರೆ.ಜಾತಿ ವಿಭಜನೆಯ ಮೂಲಕ ರಾಜಕಾರಣ ಮಾಡಲು ಹೊರಟ ಕಾಂಗ್ರೆಸ್ಗೆ ಜನರು ತಕ್ಕ ಪಾಠ ಕಳಿಸಿದ್ದಾರೆ ಎಂದು ಹೇಳಿದರು.