ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಭಾಷಣದ ಮುಖ್ಯಾಂಶಗಳು :


# ಈ ಸರ್ಕಾರವು ಜನರ ವಿಶ್ವಾಸವನ್ನು ಗಳಿಸಿದೆ. ನಾವು ಅಭಿವೃದ್ಧಿ ಕಾರ್ಯವನ್ನು  ನಿರಂತರವಾಗಿ ಕೈಗೊಳ್ಳುತ್ತಿದ್ದೇವೆ.


# ನಮ್ಮ ಸರ್ಕಾರದ ನಂಬಿಕೆ ಇಲ್ಲದಿರುವ ಬಗ್ಗೆ ಕಾರಣ ಕೇಳಿದೆವು ಆದರೆ ಅವರು ಉತ್ತರಿಸಲು ವಿಫಲರಾಗಿ ಬಂದು ತಬ್ಬಿಕೊಂಡಿದ್ದಾರೆ  ಎಂದು ಪ್ರಧಾನಿ ಮೋದಿ ಹೇಳುತ್ತಾರೆ.


# ನನ್ನ ಅಪರಾಧವೇನೆಂದರೆ ನಾನು ಯಾವುದೇ ತಪ್ಪು ಮಾಡಲಿಲ್ಲ ಮತ್ತು ನಾನು ಸರಿಯಾದ ಮಾರ್ಗದಲ್ಲಿದ್ದೇನೆ ಎನ್ನುವುದು.


# ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯ ಕುರ್ಚಿಗೆ ಹೇಗೆ ಓಡುತ್ತಿದ್ದಾರೆಂದು ನೀವು ನೋಡಿದ್ದೀರಿ. ಪ್ರಧಾನ ಮಂತ್ರಿ ಕುರ್ಚಿಯನ್ನು ಬಿಟ್ಟರೆ ಅವರು ಮತ್ತೇನು ನೋಡುತ್ತಿಲ್ಲ.


#2019 ರ ಹೊತ್ತಿಗೆ ದೇಶದ ಎಲ್ಲ ಮನೆಗಳಿಗೆ ವಿದ್ಯುಚ್ಛಕ್ತಿ ನೀಡುವ ಪ್ರತಿಜ್ಞೆ ಕೈಗೊಂಡಿದ್ದೇವೆ.


# ಅವಿಶ್ವಾಸ ಮತ ಪ್ರಸ್ತಾವ ಯಾವುದೇ ಕಾರಣಗಳಿಲ್ಲದೆ ಬರಲಿಲ್ಲ. ನಾವು ಜನರ ಹಣವನ್ನು ಗಳಿಸಿದ ವ್ಯಕ್ತಿಗಳ ಲೋಪದೋಷಗಳನ್ನು  ಗುರುತಿಸಿದೆವು ಆದ್ದರಿಂದ ಅವರು ನಮ್ಮ ವಿರುದ್ದ ಅವಿಶ್ವಾಸ ಪ್ರಸ್ತಾವನೆಯನ್ನು ಮಂಡಿಸಿದರು.ಆದರೆ ಇದನ್ನು ಈ ದೇಶದ ಜನರು ಕೊನೆಗೊಳಿಸಲಿದ್ದಾರೆ.


# ರೈತರಿಗೆ ಸಹಾಯ ಮಾಡುವ ಅವಕಾಶ ಯಾವಾಗಲೂ ಇವೆ ಆದರೆ ಅದನ್ನು ಕಾರ್ಯಗತಗೊಳಿಸುವ ಉದ್ದೇಶದಲ್ಲಿ ವೈಫಲ್ಯವಾಗಿದೆ.


# ಕಬ್ಬು ಬೆಳೆದ ರೈತರು ಎಮ್ಎಸ್ಪಿಗಳಲ್ಲಿ  80% ಲಾಭ ಪಡೆಯುತ್ತಾರೆ.


# ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರನ್ನು ಚೆಲ್ಲುತ್ತಿರುವ ಜನರು ಅಧಿಕಾರದಲ್ಲಿರುವಾಗ ಅವರಿಗೆ ಏನನ್ನೂ ಮಾಡಲಿಲ್ಲ.