Rahul Gandhi: ಉತ್ತರಪ್ರದೇಶದ ಸುಲ್ತಾನ್‌ಪುರ ಚಮ್ಮಾರ ಹೊಲಿದುಕೊಟ್ಟಿದ್ದ ಶೂ ಹಾಕಿಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಿಂಚಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಸುಲ್ತಾನ್‌ಪುರದ ಚಮ್ಮಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಚಮ್ಮಾರನ ಅಂಗಡಿಗೆ ರಾಹುಲ್‌ ಸರ್ಪ್ರೈಸ್‌ ವಿಸಿಟ್


ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜುಲೈ 26ರಂದು ಸುಲ್ತಾನ್‌ಪುರ ಹೊರವಲಯದ ವಿಧಾಯಕ್ ನಗರ ಪ್ರದೇಶದಲ್ಲಿರುವ ಚಮ್ಮಾರ ರಾಮ್‌ಚೇತ್‌ ಅಂಗಡಿಗೆ ಭೇಟಿ ನೀಡಿದ್ದರು. ಈ ವೇಳೆ ರಾಮ್‌ಚೇತ್‌ ಮತ್ತು ಚಮ್ಮಾರರ ಸಂಕಷ್ಟಗಳ ಬಗ್ಗೆ ವಿಚಾರಿಸಿದ್ದರು. ಇದೇ ವೇಳೆ ತಾವೂ ಸಹ ಒಂದು ಚಪ್ಪಲಿಯನ್ನೂ ಹೊಲಿದಿದ್ದರು. ರಾಹುಲ್ ಹೊಲಿದ ಚಪ್ಪಲಿಗೆ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗಿತ್ತು. ಆ ಚಪ್ಪಲಿಗಳನ್ನು 10 ಲಕ್ಷ ರೂ.ಗೆ ಕೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಅವುಗಳನ್ನು ಮಾರಾಟ ಮಾಡುವುದಿಲ್ಲವೆಂದು ರಾಮ್‌ಚೇತ್‌ ಹೇಳಿದ್ದರು. 


ಇದನ್ನೂ ಓದಿ: ವರುಣಾರ್ಭಕ್ಕೆ ಅರ್ಧ ಮುಳುಗಿದ ನಾಸಿಕ್‌ನಲ್ಲಿರುವ ದೇವಾಲಯಗಳು


ರಾಹುಲ್‌ ಗಾಂಧಿ ಭೇಟಿ ಬಳಿಕ ನನ್ನ ಅದೃಷ್ಟವೇ ಬದಲಾಗಿದೆ ಅಂತಾ ರಾಮ್‌ಚೇತ್‌ ಹೇಳಿಕೊಂಡಿದ್ದರು. ಈಗ ನನ್ನನ್ನು ನೋಡಲು ನೂರಾರು ಜನರು ಬರುತ್ತಿದ್ದಾರೆ. ನನ್ನ ಜೊತೆಗೆ ಸೆಲ್ಫಿ ಸಹ ತೆಗೆದುಕೊಳ್ಳುತ್ತಿದ್ದಾರೆ. ರಾಹುಲ್‌ ಗಾಂಧಿಯವರ ಬಳಿ ನಾನು ಚಮ್ಮಾರರಿಗೆ ಹಾಗೂ ನನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದೆ. ಹೀಗಾಗಿ ನನ್ನ ಸಮಸ್ಯೆಗಳನ್ನು ಕೇಳಲು ಸರ್ಕಾರಿ ಅಧಿಕಾರಿಗಳು ಸಹ ಬಂದಿದ್ದರು ಅಂತಾ ರಾಮ್‌ಚೇತ್‌ ಹೇಳಿದ್ದಾರೆ.


ಚಮ್ಮಾರನಿಗೆ ಯಂತ್ರ ಉಡುಗೊರೆ


ಮತ್ತೊಬ್ಬ ಪಿಎಸ್ ಐ ಆತ್ಮಹತ್ಯೆ


ತಮಗೆ ಒಂದು ಜೊತೆ ಅದ್ಭುತ ಶೂ ಹೊಲಿದುಕೊಟ್ಟ ಚಮ್ಮಾರ ರಾಮ್‌ಚೇತ್‌ಗೆ ರಾಹುಲ್‌ ಗಾಂಧಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರ ಕೆಲಸದ ಮೌಲ್ಯವನ್ನು ಗುರುತಿಸಿದ ರಾಹುಲ್‌, ʼಭಾರತದ ಅತಿದೊಡ್ಡ ʼಸಾಂಪ್ರದಾಯಿಕ ಕೌಶಲ್ಯಗಳ' ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ʼಭಾರತದ ದೊಡ್ಡ ಬಂಡವಾಳವು ಕಾರ್ಮಿಕ ಕುಟುಂಬಗಳ 'ಸಾಂಪ್ರದಾಯಿಕ ಕೌಶಲ್ಯ'ಗಳಲ್ಲಿ ಅಡಗಿದೆ" ಎಂದು ರಾಹುಲ್‌ ಹೇಳಿದ್ದಾರೆ.


ʼದೇಶದ ಮೂಲೆ ಮೂಲೆಯಲ್ಲಿ ವಿವಿಧ ಕೌಶಲ್ಯಗಳನ್ನು ಹೊಂದಿರುವ ಕೋಟಿಗಟ್ಟಲೆ ಪ್ರತಿಭೆಗಳಿದ್ದಾರೆ. ಈ 'ಇಂಡಿಯಾ ಮೇಕರ್ಸ್'ಗಳಿಗೆ ಅಗತ್ಯ ಬೆಂಬಲ ದೊರೆತರೆ ಅವರು ತಮ್ಮ ಹಣೆಬರಹವನ್ನು ಮಾತ್ರವಲ್ಲದೆ ದೇಶದ ಹಣೆಬರಹವನ್ನೂ ಬದಲಾಯಿಸುತ್ತಾರೆʼ ಎಂದು ರಾಹುಲ್ ಹೇಳಿದ್ದಾರೆ. ʼರಾಹುಲ್‌ ಗಾಂಧಿಯವರಿಗೆ ಹೊಲಿದ ಚಪ್ಪಲಿಗಾಗಿ ತುಂಬಾ ಕರೆಗಳು ಬರುತ್ತಿವೆ. ಆ ಚಪ್ಪಲಿಗೆ ಅನೇಕರು 10 ಲಕ್ಷ ರೂ. ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ನಾನು ಅವರ ಹಣವನ್ನು ನಿರಾಕರಿಸಿದ್ದೇನೆ. ನಾನು ಈ ಚಪ್ಪಲಿಗಳನ್ನು ಯಾರಿಗೂ ನೀಡುವುದಿಲ್ಲ. ನಾನು ಇದಕ್ಕೆ ಫ್ರೇಮ್‌ ಹಾಕಿ ಅಂಗಡಿಯಲ್ಲಿ ಸಂರಕ್ಷಿಸಿ ಇಡುತ್ತೇನೆʼ ಅಂತಾ ರಾಮ್‌ಚೇತ್‌ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.