ನನ್ನ ಕಾಶ್ಮೀರದ ಭೇಟಿಗೆ ಯಾವುದೇ ಷರತ್ತುಗಳಿಲ್ಲ, ಯಾವತ್ತು ಬರಲಿ ಹೇಳಿ ?- ರಾಹುಲ್ ಗಾಂಧಿ
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಬೇಡಿಕೆಯನ್ನು ಮತ್ತೆ ಪುನರಾವರ್ತಿಸಿರುವ ರಾಹುಲ್ ಗಾಂಧಿ ಯಾವಾಗ ಬರಬಹುದು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಕೇಳಿದ್ದಾರೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಬೇಡಿಕೆಯನ್ನು ಮತ್ತೆ ಪುನರಾವರ್ತಿಸಿರುವ ರಾಹುಲ್ ಗಾಂಧಿ ಯಾವಾಗ ಬರಬಹುದು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಕೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಜನರನ್ನು ಯಾವುದೇ ಷರತ್ತುಗಳಿಲ್ಲದೆ ಭೇಟಿ ನೀಡುವ ಮಲಿಕ್ ಅವರ ಆಹ್ವಾನವನ್ನು ತಾವು ಸ್ವೀಕರಿಸಿರುವುದಾಗಿ ಹೇಳಿದ ರಾಹುಲ್ ಗಾಂಧಿ, ರಾಜ್ಯಪಾಲರ ಉತ್ತರ ದುರ್ಬಲವಾದದ್ದು ಎಂದು ಹೇಳಿದರು."ಆತ್ಮೀಯ ಮಾಲಿಕ್ ಜಿ, ನನ್ನ ಟ್ವೀಟ್ ಗೆ ನಿಮ್ಮ ದುರ್ಬಲ ಉತ್ತರವನ್ನು ನಾನು ನೋಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಜನರನ್ನು ಭೇಟಿ ಮಾಡಲು ನಿಮ್ಮ ಆಹ್ವಾನವನ್ನು ನಾನು ಸ್ವೀಕರಿಸುತ್ತೇನೆ, ಯಾವುದೇ ಷರತ್ತುಗಳಿಲ್ಲ. ನಾನು ಯಾವಾಗ ಬರಬಹುದು ಹೇಳಿ ?ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಂಗಳವಾರದಂದು ಮಲಿಕ್ ಅವರು ಕಾಶ್ಮೀರ ಕಣಿವೆಯ ಭೇಟಿಗೆ ಪೂರ್ವ ಷರತ್ತುಗಳನ್ನು ಹಾಕಿದ್ದಕ್ಕಾಗಿ ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದರು, ಮತ್ತು ವಿರೋಧ ಪಕ್ಷದ ನಾಯಕರ ನಿಯೋಗವನ್ನು ತರಲು ಪ್ರಯತ್ನಿಸುವ ಮೂಲಕ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಶ್ಮೀರದಲ್ಲಿ ಹಿಂಸಾಚಾರದ ವರದಿಗಳು ಬಂದಿವೆ ಎಂದು ರಾಹುಲ್ ಗಾಂಧಿಯವರ ಹೇಳಿಕೆಯ ನಂತರ, ರಾಜ್ಯಪಾಲ ಮಲಿಕ್ ಕಣಿವೆಗೆ ಭೇಟಿ ಮಾಡಲು ಮತ್ತು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಲು ವಿಮಾನವನ್ನು ಕಳುಹಿಸುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಬಂಧನಕ್ಕೆ ಒಳಗಾದ ಮುಖ್ಯವಾಹಿನಿಯ ನಾಯಕರನ್ನು ಭೇಟಿ ಮಾಡುವುದು ಸೇರಿದಂತೆ ಗಾಂಧಿ ಭೇಟಿಗಾಗಿ ಹಲವು ಷರತ್ತುಗಳನ್ನು ಮಂಡಿಸಿದ್ದಾರೆ ಎಂದು ರಾಜ್ಯಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗ ಅವರ ರಾಜ್ಯಪಾಲರ ಯು ಟರ್ನ್ ನಿರ್ಧಾರಕ್ಕೆ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ತಮ್ಮ ಮಾತಿಗೆ ಬದ್ದರಾಗಿರಬೇಕೆಂದು ಹೇಳಿದೆ.