ಪ್ರಧಾನಿಮಂತ್ರಿಯಾಗುವ ಹಕ್ಕು ರಾಹುಲ್ ಗಾಂಧಿಯವರಿಗಿದೆ- ಶಿವಸೇನಾ
ಮುಂಬೈ: ಇತ್ತೀಚಿಗೆ ರಾಹುಲ್ ಗಾಂಧಿ ತಾವು ಕೂಡ ಪ್ರಧಾನಮಂತ್ರಿಯಾಗುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದರು ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇದನ್ನು ದುರಹಂಕಾರ ಟೀಕಿಸಿದ್ದರು.
ಆದರೆ ಈಗ ರಾಹುಲ್ ಗಾಂಧಿಯವರ ಬೆಂಬಲಕ್ಕೆ ನಿಂತಿರುವ ಬಿಜೆಪಿ ಮಿತ್ರ ಪಕ್ಷ ಶಿವಸೇನಾ ಈ ದೇಶದಲ್ಲಿ, ಪ್ರತಿ ವ್ಯಕ್ತಿಗೆ ಪ್ರಧಾನಿಯಾಗಬೇಕೆಂಬ ಇಚ್ಚೆಯ ಹಕ್ಕಿದೆ, ಮೋದಿ ಜೀ ಸ್ವತಃ ಪ್ರಧಾನ್ ಸೇವಕ ಎಂದು ಕರೆಯುತ್ತಿರುವಾಗ ಈ ದೇಶದ ಯಾವುದೇ ಸೇವಕ ಪ್ರಧಾನಮಂತ್ರಿಯಾಗಬಹುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದರು.
ಇತ್ತೀಚಿಗೆ ರಾಹುಲ್ ಗಾಂಧಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಲ್ಲಿ ಪ್ರಧಾನಿಯಾಗುವುದಾಗಿ ಹೇಳಿದ್ದರು ಇದಾದನಂತರ ಪ್ರಧಾನಿ ಮೋದಿ ರಾಹುಲ್ ಗಾಂಧಿ ಮೇಲೆ ಕಿಡಿಕಾರಿದ್ದರು. ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಕೂಡ ರಾಹುಲ್ ಹೇಳಿಕೆಯನ್ನು "ಅಪಕ್ವ" ಎಂದು ಟೀಕಿಸಿದ್ದರು.