ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಕೇಂದ್ರದಲ್ಲಿ ಮಂತ್ರಿಯಾಗಿರುವ ಪ್ರಕಾಶ್ ಜಾವಡೆಕರ್, ಶುಕ್ರವಾರ ಸಂಜೆ ದೆಹಲಿಯ ಡಿಡಿಯು ಮಾರ್ಗದಲ್ಲಿರುವ ಪಕ್ಷದ ಮುಖ್ಯ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಗೆ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ರಾಹುಲ್ ಗಾಂಧಿ 2019ರ ಸಾಲಿನ ವರ್ಷದ ಸುಳ್ಳು ಎಂದೇ ಕರೆಯಿಸಿಕೊಳ್ಳಲು ಅರ್ಹರು ಎಂದಿದ್ದಾರೆ. " ಅಂದು ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಹಾಗೂ ಇಂದು ಪಕ್ಷದ ಮುಖಂಡರಾಗಿರುವ ವೇಳೆಯಲ್ಲೂ ರಾಹುಲ್ ಮಾತನಾಡುತ್ತಾರೆ. ಆದರೆ, ಎರಡೂ ಸಂದರ್ಭಗಳಲ್ಲಿ ಕೇವಲ ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದು, ಅವರು 2019ರ ಸಾಲಿನ ಸುಳ್ಳು ಎಂದೇ ಕರೆಯಿಸಿಕೊಳ್ಳಲು ಅರ್ಹರು" ಎಂದು ಜಾವಡೆಕರ್ ಹೇಳಿದ್ದರೆ. ಮೊದಲು ರಾಹುಲ್ ನೀಡುತ್ತಿದ್ದ ಹೇಳಿಕೆಗಳಿಂದ ಕೇವಲ ಅವರ ಕುಟುಂಬ ತೊಂದರೆ ಅನುಭವಿಸುತ್ತಿತ್ತು. ಆದರೆ, ಇದೀಗ ಅವರು ನೀಡುತ್ತಿರುವ ಹೇಳಿಕೆಯಿಂದ ಜನರು ಹಾಗೂ ಕಾಂಗ್ರೆಸ್ ಪಕ್ಷದವರು ತೊಂದರೆ ಅನುಭವಿಸುವ ಪರೀಸ್ಥಿತಿ ಎದುರಾಗಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

"ಇಂದು ರಾಹುಲ್ ಗಾಂಧಿ NPR ಅನ್ನು ಜನತೆಯ ಮೇಲೆ ಸರ್ಕಾರ ವಿಧಿಸುತ್ತಿರುವ ತೆರಿಗೆ ಎಂದು ಕರೆದಿದ್ದಾರೆ. ಆದರೆ, ವಾಸ್ತವದಲ್ಲಿ NPR ಜನಸಂಖ್ಯೆಯ ಒಂದು ರಜಿಸ್ಟರ್ ಆಗಿದ್ದು, ಇದರಲ್ಲಿ ಜನರ ಮಾಹಿತಿ ಕಲೆಹಾಕಲಾಗುತ್ತದೆ. ಇದರಲ್ಲಿ ತೆರಿಗೆ ಎಲ್ಲಿಂದ ಬಂತು?" ಎಂದು ಪ್ರಶ್ನಿಸಿರುವ ಜಾವಡೆಕರ್ "ತೆರಿಗೆ ಕಾಂಗ್ರೆಸ್ ಪಕ್ಷದ ಪರಂಪರೆಯಾಗಿದ್ದು, ಜಯಂತಿ ತೆರಿಗೆ, ಕಲ್ಲಿದ್ದಲು ತೆರಿಗೆ, 2ಜಿ ತೆರಿಗೆ, ಸೋದರಮಾವನ ತೆರಿಗೆ ಇವು ಆ ಪರಂಪರೆಯ ಭಾಗವಾಗಿವೆ" ಎಂದು ವಾಗ್ದಾಳಿ ನಡೆಸಿದ್ದಾರೆ.


"ಇಂದು ನಾವು ಕಾಂಗ್ರೆಸ್ ಪಕ್ಷಕ್ಕೆ ಎರಡು ಬೇಡಿಕೆಗಳನ್ನು ಸಲ್ಲಿಸುತ್ತಿದ್ದು, ಮೊದಲನೆಯದಾಗಿ ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಿ. ಎರಡನೆಯದಾಗಿ 'ಸಾಲ ಮನ್ನಾಗಳಂತಹ ಭರವಸೆಗಳನ್ನು ನೀಡುವುದನ್ನು ಬಂದ್ ಮಾಡಿ. ಅವು ಎಂದಿಗೂ ಪೂರ್ಣಗೊಳ್ಳುವುದಿಲ್ಲ" ಎಂದು ಜಾವಡೆಕರ್ ಹೇಳಿದ್ದಾರೆ.