ನವದೆಹಲಿ: ಕಾಂಗ್ರೆಸ್ ಯುವನಾಯಕ, ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮತ್ತೊಮ್ಮೆ ಕಿಡಿಕಾರಿದೆ. ಈ ಬಾರಿ ರಾಹುಲ್ ಗಾಂಧಿಯವರನ್ನು ರಾವಣನಿಗೆ ಹೋಲಿಸಿ ಬಿಜೆಪಿ ಕಟುವಾಗಿ ಟೀಕಿಸಿದೆ.


COMMERCIAL BREAK
SCROLL TO CONTINUE READING

ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ನವಯುಗದ ರಾವಣ ಎಂದು ಟೀಕಿಸಿರುವ ಪೋಸ್ಟರ್ ಹಂಚಿಕೊಂಡಿದೆ. ‘ರಾಹುಲ್ ಗಾಂಧಿಯವರು ರಾಕ್ಷಸರ ರಾಜ ರಾವಣನ 'ನವ ಯುಗದ' ಅವತಾರವೆಂದು ಚಿತ್ರಿಸುವ ಪೋಸ್ಟರ್ ಅನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದೆ. ಇದು ಇದೀಗ ವಿವಾದವನ್ನು ಹುಟ್ಟುಹಾಕಿದೆ. ಟ್ವಿಟರ್‍ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಬಿಜೆಪಿ, ‘ನವ ಯುಗದ ರಾವಣ ಇಲ್ಲಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿ, ರಾಮ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು’ ಅಂತಾ ಕಟುವಾಗಿ ಟೀಕಿಸಿದೆ.


ಭೂಮಿ ತಾಯಿ ಹೋರಾಟ ಸಮಿತಿಯಿಂದ ವಿನೂತನ ಪ್ರತಿಭಟನೆ


ಫಿಲ್ಮಿ ಸ್ಟೈಲ್‍ನಲ್ಲಿ ಪೋಸ್ಟರ್ ರೂಪಿಸಿರುವ ಬಿಜೆಪಿ, ಚಿತ್ರದ ಟೈಟಲ್‍ಗೆ ‘Ravan, a Congress party production, directed by George Soros’ ಎಂದು ಬರೆದುಕೊಂಡಿದೆ. ಬಿಜೆಪಿಯ ಈ ಪೋಸ್ಟರ್‍ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ, ಟೀಕೆ ಏನೇ ಇರಲಿ, ಆದರೆ ಈ ರೀತಿ ಒಬ್ಬ ವ್ಯಕ್ತಿಯನ್ನು ಟೀಕಿಸುವುದು ಸರಿಯಲ್ಲವೆಂದು ಸೋಷಿಯಲ್ ಮೀಡಿಯಾ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಬಿಜೆಪಿ ವಿರುದ್ಧ ಕೆ.ಸಿ.ವೇಣುಗೋಪಾಲ್ ಕಿಡಿ: ರಾಹುಲ್ ಗಾಂಧಿಯವರನ್ನು ರಾವಣನ ರೀತಿ ಚಿತ್ರಿಸಿ ಟೀಕಿಸಿರುವ ಬಿಜೆಪಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ರಾಹುಲ್ ಗಾಂಧಿಯವರನ್ನು ಬಿಜೆಪಿ ರಾವಣನಿಗೆ ಹೋಲಿಸಿದ ನಾಚಿಕೆಗೇಡಿನ ಗ್ರಾಫಿಕ್ ಅನ್ನು ಖಂಡಿಸಲು ಯಾವುದೇ ಪದಗಳಿಲ್ಲ. ಬಿಜೆಪಿಯ ಕೆಟ್ಟ ಉದ್ದೇಶಗಳು ಸ್ಪಷ್ಟವಾಗಿವೆ, ತನ್ನ ಅಜ್ಜಿ ಮತ್ತು ತಂದೆಯನ್ನು ಹತ್ಯೆಗಳಿಂದ ಕಳೆದುಕೊಂಡಿರುವ ಅವನನ್ನು ಅವರು ಕೊಲ್ಲಲು ಬಯಸುತ್ತಾರೆ’ ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ


ಬಿಜೆಪಿ ಮಾಡುತ್ತಿರುವ ಯೋಜಿತ ಪಿತೂರಿಯನ್ನು ಸೂಚಿಸುತ್ತದೆ. ಅವರ ದ್ವೇಷ ತುಂಬಿದ ಸಿದ್ಧಾಂತದ ತಿರುಳನ್ನು ಇದು ತಿಳಿಸುತ್ತದೆ’ ಎಂದು ಅವರು ಟೀಕಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.