Rahul Gandhi : ಕೋವಿಡ್ ನಿರ್ವಹಣೆ ಕುರಿತು `ಶ್ವೇತಪತ್ರ` ಬಿಡುಗಡೆ ಮಾಡಿದ ರಾಹುಲ್ ಗಾಂಧಿ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ಬಿಡುಗಡೆ ಮಾಡಿದ್ದಾರೆ
ನವದೆಹಲಿ : ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್ ಇಂದು 'ಶ್ವೇತ ಪತ್ರ' ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ರಾಹುಲ್ ಗಾಂಧಿ(Rahul Gandhi), 3ನೇ ಅಲೆಯನ್ನು ಸಮರ್ಪಕವಾಗಿ ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನ ಮೊದಲ ಮತ್ತು 2ನೇ ಅಲೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ವಹಣೆ ವಿನಾಶಕಾರಿಯಾಗಿರುವುದು ಸ್ಪಷ್ಟವಾಗಿದೆ. ಅದು ಯಾವ ರೀತಿ ವಿನಾಶಕಾರಿಯಾಗಿದೆ, ಸರ್ಕಾರ ಎಲ್ಲೆಲ್ಲಿ ಎಡವಿದೆ, ಎಂಬುದನ್ನು ಈ ಶ್ವೇತಪತ್ರದಲ್ಲಿ ಎತ್ತಿ ತೋರಿಸಲು ಪ್ರಯತ್ನಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇನ್ನು ಈ ರೀತಿ ಡೇಟಾ ಬ್ಯಾಕ್ ಅಪ್ ಮಾಡಲಿದೆ WhatsApp, ಬಳಕೆದಾರರ ಮೇಲಾಗುವ ಪರಿಣಾಮ ಏನು?
ಕೋವಿಡ್ ನಿರ್ವಹಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶ. ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಮೂರನೇ ಅಲೆ ಎದುರಿಸಲು ಸಿದ್ಧವಾಗಲು ಸಹಾಯ ಮಾಡುವುದು ಈ ಶ್ವೇತಪತ್ರ(White Paper)ದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Aadhaar-SIM: ಒಂದು ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್‌ಗಳನ್ನು ಖರೀದಿಸಬಹುದು?
ಕೋವಿಡ್(Covid-19) ವಿರುದ್ಧ ಹೋರಾಡುವುದಕ್ಕಿರುವ ಏಕೈಕ ಪ್ರಮುಖ ಅಸ್ತ ಲಸಿಕೆ ಎಂದು ಪ್ರತಿಪಾದಿಸಿದ ಅವರು, ಸಾಧ್ಯವಾದಷ್ಟು ಬೇಗ ಶೇ 100 ರಷ್ಟು ಲಸಿಕೆ ಗುರಿಯನ್ನು ತಲುಪಬೇಕು ಎಂದು ಒತ್ತಾಯಿಸಿದರು. ಕೋವಿಡ್ 19 ಲಸಿಕೆ(Covid 19 Vaccine) ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಪಕ್ಷಪಾತ ಮಾಡದೆ ಎಲ್ಲ ರಾಜ್ಯಗಳನ್ನು ಸಮವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.