ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಬಿಜೆಪಿ ಸಂಸದರಾದ ಮೀನಾಕ್ಷಿ ಲೆಖಿ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು,  ರಫೇಲ್‌ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ್ದ 'ಚೌಕಿದಾರ್ ಚೋರ್ ಹೈ' ಎಂಬ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದು, ನ್ಯಾಯಾಲಯ ಈ ಪದಗಳನ್ನು ಬಳಸಿಲ್ಲ, ರಾಜಕೀಯ ಪ್ರಚಾರದ ವೇಳೆ ಉದ್ವೇಗದಿಂದಾಗಿ ಈ ಹೇಳಿಕೆ ನೀಡಲಾಗಿದೆ.  ನನ್ನ ಹೇಳಿಕೆಗಳನ್ನು ರಾಜಕೀಯ ವಿರೋಧಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.



COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂಕೋರ್ಟ್ ಆದೇಶ ಎಂದು ಬಿಂಬಿಸಲು ಯತ್ನಿಸಿದ್ದಾರೆ.  ಕೋರ್ಟ್ ತೀರ್ಪಿನಲ್ಲಿ ಇಲ್ಲದ ಅಂಶಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮಾಡಿ ಟೀಕೆಯಿಂದ ನ್ಯಾಯಾಂಗ ನಿಂದನೆಯಾದಂತಾಗಿದೆ. ರಾಹುಲ್ ಅವರ ಭಾಷೆ, ಅವರು ಬಳಸಿರುವ ಪದಗಳು ಬೇರೆ ಅರ್ಥವೇ ನೀಡುವಂತಿವೆ ಎಂದು ಮೀನಾಕ್ಷಿ ಲೇಖಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.


ಎಪ್ರಿಲ್ 15ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ರಾಹುಲ್ ಗಾಂಧಿ ಹಲವೆಡೆ ತಮ್ಮ ಭಾಷಣಗಳಲ್ಲಿ ಕೋರ್ಟಿನ ತೀರ್ಪಿನಲ್ಲಿ ಉಲ್ಲೇಖಿಸದೆ ಇರುವ ಅಂಶಗಳ ಬಗ್ಗೆ, ಕಾನೂನುಬದ್ಧವಾಗಿ ಪಡೆಯದ ದಾಖಲೆಗಳನ್ನು ಉಲ್ಲೇಖಿಸಿ  ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅಟಾರ್ನಿ ಜನರಲ್‌ ಕೋರ್ಟಿನ ಗಮನಕ್ಕೆ ತಂದಿದ್ದಾರೆ.  ಈ ಬಗ್ಗೆ ರಾಹುಲ್ ಗಾಂಧಿ ಎಪ್ರಿಲ್ 22ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ನೋಟೀಸ್ ಜಾರಿ ಮಾಡಿದ್ದರು.