Priyanka Gandhi Viral Video: ರಾಜಕಾರಣ ಏನೇ ಇರಲಿ, ಲೋಕಸಭೆಯ ಪ್ರತಿಪಕ್ಷದ ನಾಯಕ  ರಾಹುಲ್ ಗಾಂಧಿ ಮತ್ತು ಅವರ ಸಹೋದರಿ, ಹೊಸದಾಗಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿ ನಡುವಿನ ಅಣ್ಣ-ತಂಗಿ ಸಂಬಂಧ ಒಂಥರಾ ಚೆಂದ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ನಡುವಿನ ಅನ್ಯೋನ್ಯತೆ ನಿಜಕ್ಕೂ ಅನನ್ಯ. ಅವರಿಬ್ಬರ ಪ್ರೀತಿ ಎಂಥದೆಂಬುದು ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಸಂಸತ್ ಭವನ ಪ್ರವೇಶಿಸುವಾಗ ಮತ್ತೊಮ್ಮೆ ಪ್ರತಿಫಲನಗೊಂಡಿತು. 


COMMERCIAL BREAK
SCROLL TO CONTINUE READING

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಹುಲ್ ಗಾಂಧಿ ಅವರಿಗಿಂತಲೂ ಅಧಿಕ ಮತಗಳ ಅಂತರದಿಂದ ಗೆದ್ದು ಗುರುವಾರ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿದರು. ಅಣ್ಣ-ತಂಗಿಯರು ಜೊತೆಜೊತೆಯಾಗಿ ಸಂಸತ್ ಆವರಣ ಪ್ರವೇಶಿಸಿದರು. ಆಮೇಲೆ ನಡೆಯಿತು ಸ್ವಾರಸ್ಯಕರ ಘಟನೆ.


ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಾರಿಳಿದು ಸಂಸತ್ ಭವನ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಪತ್ರಕರ್ತರು ಪ್ರಿಯಾಂಕಾ ಗಾಂಧಿ ಅವರನ್ನು ಸುತ್ತುವರಿದು ಪ್ರಶ್ನೆಗಳ ಮಳೆಗರೆದರು. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ ಬರುವವರೆಗೆ ಗೇಟ್ ಬಳಿ ಕಾಯುತ್ತಾ ನಿಂತಿದ್ದ ರಾಹುಲ್ ಗಾಂಧಿ, ಇನ್ನೇನು ಪ್ರಿಯಾಂಕಾ  ಗಾಂಧಿ ಸಂಸತ್ ಒಳ ಹೊಕ್ಕಬೇಕೆನ್ನುವಷ್ಟರಲ್ಲಿ ‘ಸ್ಟಾಪ್ ಸ್ಟಾಪ್…’ ಎಂದು ತಡೆಯೊಡ್ಡಿದರು. ತಂಗಿ ಸಂಸತ್ ಪ್ರವೇಶಿಸುವ ಅಪರೂಪದ ಕ್ಷಣವನ್ನು ಸೆರೆಹಿಡಿದರು.


ಮೊದಲ ಬಾರಿಗೆ ಸಂಸದರಾಗಿ ಪ್ರಮಾಣವಚನ: ಅಜ್ಜಿ ಇಂದಿರಾ ಗಾಂಧಿಯನ್ನೇ ನೆನೆಪಿಸುವಂತಿರುವ ಪ್ರಿಯಾಂಕಾ ಗಾಂಧಿ!


ಈಗ ರಾಹುಲ್ ಗಾಂಧಿ ಸಂಸತ್ ಪ್ರವೇಶಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರ ಫೋಟೋ ತೆಗೆಯುತ್ತಿರುವ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಅಣ್ಣ-ತಂಗಿಯರ ಸಂಬಂಧವನ್ನು ಮನಸಾರ ಹೊಗಳುತ್ತಿದ್ದಾರೆ. ‘ರಿಯಲ್ ಬ್ರದರ್ ಅಂಡ್ ಸಿಸ್ಟರ್ ಬಾಂಡಿಂಗ್’, ‘ಇಟ್ ಈಸ್ ರಿಯಲಿ ಹಿಸ್ಟಾರಿಕ್ ಮೂಮೆಂಟ್’, ‘ಕಾಂಗ್ರಾಜುಲೇಷನ್ಸ್ ಪ್ರಿಯಾಂಕಾ ಗಾಂಧಿ’ ಎಂಬಿತ್ಯಾದಿಯಾಗಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.


ದಾಖಲೆಗಳನ್ನು ಮುರಿದ ಪ್ರಿಯಾಂಕಾ ಗಾಂಧಿ.. ವಯನಾಡಿನಲ್ಲಿ ಇಂದಿರಮ್ಮನ ಮೊಮ್ಮಗಳಿಗೆ ಪಟ್ಟಾಭಿಷೇಕ!!


ಅಜ್ಜಿ ಇಂದಿರಾ ಗಾಂಧಿಯಂತೆ ಕಂಡ ಪ್ರಿಯಾಂಕಾ!
ಚಿನ್ನದ ಬಣ್ಣದ ಬಾರ್ಡರ್ ವುಳ್ಳ ಬಿಳಿ ಸೀರೆಯನ್ನು ತೊಟ್ಟು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ಅವರು ಅಜ್ಜಿ ಇಂದಿರಾ ಗಾಂಧಿ ಅವರಂತೆ ಕಾಣುತ್ತಿದ್ದರು. ದೇವರನಾಡು ಎಂದೇ ಕರೆಯಲ್ಪಡುವ ಕೇರಳದಿಂದ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿ  ಕೇರಳದ ಹಬ್ಬಗಳಲ್ಲಿ ಸಾಮಾನ್ಯವಾಗಿ ಮಲೆಯಾಳಿ ಮಹಳೆಯರು ತೊಡುವ ಕಸವು ಸೀರೆ, ಅಂದರೆ ಚಿನ್ನದ ಬಣ್ಣದ ಬಾರ್ಡರ್ ವುಳ್ಳ ಬಿಳಿ ಸೀರೆಯನ್ನು ತೊಟ್ಟಿದ್ದರು. ಹಲವು ವರ್ಷಗಳಿಂದ ರಾಜಕೀಯದಲ್ಲಿ ಇದ್ದರೂ ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಸಹೋದರ ರಾಹುಲ್ ಗಾಂಧಿ ಅವರಂತೆಯೇ ಸಂವಿಧಾನದ ಪುಸ್ತಕವನ್ನು ಹಿಡಿದು ಗಮನ ಸೆಳೆದರು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.