ಮೀಟೂ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ ರಾಹುಲ್ ಗಾಂಧಿ
ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ #MeToo ಮೀಟೂ ಚಳುವಳಿ ಈಗ ರಾಷ್ಟ್ರಾಧ್ಯಂತ ಭಾರಿ ಸುದ್ದಿ ಮಾಡಿದೆ.ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಮಹಿಳೆಯರ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ #MeToo ಮೀಟೂ ಚಳುವಳಿ ಈಗ ರಾಷ್ಟ್ರಾಧ್ಯಂತ ಭಾರಿ ಸುದ್ದಿ ಮಾಡಿದೆ.ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಮಹಿಳೆಯರ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ" ಇದು ಎಲ್ಲರು ಮಹಿಳೆಯರನ್ನು ಗೌರವ ಮತ್ತು ಘನತೆಯಿಂದ ಕಾಣುವುದನ್ನು ಕಲಿಯಬೇಕಾಗಿದೆ. ಅವರಿಗೆ ಈ ವಿಚಾರವಾಗಿ ಅವಕಾಶ ಬಂದ ಆಗಿಲ್ಲ. ಆದ್ದರಿಂದ ಬದಲಾವಣೆಯನ್ನು ತರಲು ಸತ್ಯ ಹೊರಬರಬೇಕಾಗಿದೆ ಎಂದು ಅವರು ತಿಳಿಸಿದರು.
ರಫೇಲ್ ವಿಚಾರವಾಗಿ ಮಾತನಾಡಲು ಸೇರಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ " ಮೀಟೂ ಇದೊಂದು ದೊಡ್ಡ ವಿಷಯ ಪತ್ರಿಕಾಗೋಷ್ಠಿ ಮುಗಿದ ನಂತರ ವಿವರವಾಗಿ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದರು.ಇದೆ ವೇಳೆ ಎಂ.ಜೆ ಅಕ್ಬರ್ ಮೇಲೆ ಬಂದಿರುವ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.