ಬಿಜೆಪಿಯ ಆದಾಯದಲ್ಲಿ ಭಾರೀ ಏರಿಕೆ: ರಾಹುಲ್ ಗಾಂಧಿ ಆಕ್ರೋಶ
2019-20ನೇ ಸಾಲಿನಲ್ಲಿ ಬಿಜೆಪಿ ಆದಾಯದಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎಂಬ ವರದಿ ಉಲ್ಲೇಖಿಸಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಚುನಾವಣಾ ಬಾಂಡ್(Electoral Bonds)ಗಳ ಮೂಲಕ 2019-20ನೇ ಸಾಲಿನಲ್ಲಿ ಬಿಜೆಪಿಯ ಆದಾಯದಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ಆದಾಯವು ಶೇ.50ರಷ್ಟು ಏರಿಕೆಯಾಗಿದೆ. ಹಾಗಿದ್ದರೆ ನಿಮ್ಮದು?’ ಎಂದು ದೇಶದ ಜನತೆಯನ್ನು ಪ್ರಶ್ನಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಎನ್‌ಜಿಒದ ವರದಿ ಹಂಚಿಕೊಂಡಿರುವ ರಾಹುಲ್(Rahul Gandhi), ಕೇಸರಿ ಪಕ್ಷದ ಆದಾಯ(BJP Income)ವು ಚುನಾವಣಾ ಬಾಂಡ್‌ಗಳ ಮೂಲಕ ಶೇ.50 ರಷ್ಟು ಹೆಚ್ಚಾಗಿದೆ. ಹಾಗಾದರೆ ದೇಶದ ಜನರ ಆದಾಯದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಚುನಾವಣಾ ಬಾಂಡ್‌ಗಳನ್ನು ವಿರೋಧಿಸಿದ್ದು, ಇದು ಪಕ್ಷವನ್ನು ಅಧಿಕಾರದಲ್ಲಿರಲು ಸಹಾಯ ಮಾಡುತ್ತದೆ ಎಂದು ಆರೋಪಿಸಿದೆ.
PM Kisan ಯೋಜನೆ ಅಡಿ ಈಗ ರೈತರಿಗೆ ಸಿಗಲಿದೆ 6000 ಬದಲಿಗೆ,12000 ರೂ.!
ಕೊರೊನಾ(COVID-19) ಸಾಂಕ್ರಾಮಿಕದ ಸಂಕಷ್ಟ ಕಾಲದಲ್ಲಿಯೂ ಬಿಜೆಪಿಯ ಆದಾಯದಲ್ಲಿ ಗಣನೀಯ ಏರಿಕೆಯಾಗಿರುವ ಬಗ್ಗೆ ರಾಹುಲ್ ಗಾಂಧಿ ಆಶ್ಚರ್ಯ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. ಚುನಾವಣಾ ಬಾಂಡ್‌ಗಳಿಂದ ಆಳುವ ಪಕ್ಷಕ್ಕೆ ಹಣದ ಹೊಳೆಯೇ ಹರಿದು ಬರುತ್ತಿದೆ. ಇದರಿಂದಲೇ ಬಿಜೆಪಿ ಅಧಿಕಾರಕ್ಕೇರಲು ನೆರವಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಅವಧಿಯಲ್ಲಿಯೂ ಬಿಜೆಪಿಗೆ ಚುನಾವಣಾ ಬಾಂಡ್ ರೂಪದಲ್ಲಿ ಸಾವಿರಾರು ಕೋಟಿ ರೂ. ದೇಣಿಗೆ ಹರಿದುಬಂದಿದೆ ಅಂತಾ ಕಾಂಗ್ರೆಸ್(Congress) ದೂರಿದೆ.
ಬಿಜೆಪಿಗೆ ಚುನಾವಣಾ ಬಾಂಡ್‌ಗಳಿಂದ 2,555 ಕೋಟಿ ರೂ.
2019-20ನೇ ಸಾಲಿನಲ್ಲಿ ಚುನಾವಣಾ ಬಾಂಡ್‌ಗಳಿಂದ ಬಿಜೆಪಿ(BJP) ಬರೋಬ್ಬರಿ 2,555 ಕೋಟಿ ರೂ. ಗಳಿಸಿದೆ. ಈ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳಿಂದ ಸಂಗ್ರಹಣೆಯಾದ ಒಟ್ಟು ಮೊತ್ತದಲ್ಲಿ ಬಿಜೆಪಿಯ ಪಾಲು ಶೇ.76ರಷ್ಟಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿತ್ತು.
ಇದನ್ನೂ ಓದಿ: COVID-19 update: ಒಂದೇ ದಿನದಲ್ಲಿ ಭಾರತದಲ್ಲಿ 46,759 ಹೊಸ ಸೋಂಕುಗಳ ವರದಿ
2019-20ನೇ ಸಾಲಿನಲ್ಲಿ ಒಟ್ಟು 3,355 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್(Electoral Bonds) ಮಾರಾಟವಾಗಿದೆ. ಈ ಪೈಕಿ ಬಿಜೆಪಿ 2,555 ಕೋಟಿ ರೂ. ಪಡೆದುಕೊಂಡಿದೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಶೇ.75 ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ಬಿಜೆಪಿಯು 1,450 ಕೋಟಿ ರೂ. ಗಳಿಸಿತ್ತು.
ಕಾಂಗ್ರೆಸ್(Congress)ನ ಗಳಿಕೆ ಇದೇ ಸಮಯದಲ್ಲಿ ಶೇ.17ರಷ್ಟು ಇಳಿಕೆಯಾಗಿದೆ. 2019-20ನೇ ಸಾಲಿನಲ್ಲಿ ಕಾಂಗ್ರೆಸ್ 383 ಕೋಟಿ ರೂ. ಗಳಿಸಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 100.46 ಕೋಟಿ ರೂ., ಮಹಾರಾಷ್ಟ್ರದ ಶಿವಸೇನೆ 41 ಕೋಟಿ ರೂ., ತಮಿಳುನಾಡಿನ ಡಿಎಂಕೆ 45 ಕೋಟಿ ರೂ., ರಾಷ್ಟ್ರೀಯ ಜನತಾದಳ 2.5ಕೋಟಿ ರೂ. ಹಾಗೂ ಆಮ್ ಆದ್ಮಿ ಪಕ್ಷ 18 ಕೋಟಿ ರೂ. ಗಳಿಸಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ