ಮೋದಿ ಹಣ ವಂಚನೆಗೆ ರಾಹುಲ್ ಗಾಂಧಿ ಕಂಡು ಹಿಡಿದ ಸೂತ್ರವೇನು ಗೊತ್ತಾ?
ನವದೆಹಲಿ: ರಾಹುಲ್ ಗಾಂಧಿ ಇತ್ತೀಚಿಗೆ ಟ್ವಿಟ್ಟರ್ ಮೂಲಕ ಸರಕಾರಕ್ಕೆ ವ್ಯಂಗ ಮಿಶ್ರಿತ ತೀಕ್ಷ್ಣ ಟ್ವೀಟ್ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಈ ಬಾರಿ ಅವರು ಎತ್ತಿರುವ ವಿಷಯ ಕುತೂಹಲಕರವಾಗಿದೆ. ಮೋದಿ ಸರ್ಕಾರದ ಹಗರಣಗಳ ವಿಷಯ ಪ್ರಸ್ತಾಪಿಸುತ್ತಾ ಟ್ವೀಟ್ ನಲ್ಲಿ ಕೇವಲ ಪ್ರಧಾನಿ ಮೋದಿಯವರನ್ನೇ ಅಷ್ಟೇ ಅಲ್ಲದೆ ತ್ರಿವಳಿ ಮೋದಿಗಳ ಬಗ್ಗೆ ತಮ್ಮ ಹೊಸ ಸೂತ್ರವೊಂದನ್ನು ರೂಪಿಸಿದ್ದಾರೆ.
ಹಗರಣಗಳಿಂದ ಪಾರಾಗುವ ಬಗೆ:
Na(Mo)
La(Mo) + Ni(Mo) -----> Bha(Go)#ModiRobsIndia
ಈ ಸೂತ್ರದಲ್ಲಿ ರಾಹುಲ್ ಗಾಂಧಿ ಐಪಿಎಲ್ ನ ಲಲಿತ್ ಮೋದಿ, ನಿರವ್ ಮೋದಿ ಹೇಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಹಗರಣಗಳಿಂದ ಮುಕ್ತರಾಗಿ ದೇಶವನ್ನು ಬಿಟ್ಟು ಹೊರಹೋಗಿದ್ದಾರೆ ಎನ್ನುವುದನ್ನು ವಿವರಿಸಲು ರಾಹುಲ್ ಗಾಂಧಿ ಸೂತ್ರದ ಮೂಲಕ ಟ್ವಿಟ್ಟರ್ ನಲ್ಲಿ ವಿವರಿಸಿದ್ದಾರೆ. ಈ ಪೋಸ್ಟ್ಈ ಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.