ನವ ದೆಹಲಿ: ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿಯವರು ನೆಹರು ವಂಶದ ಆರನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಹುಲ್ ತಾಯಿ ಸೋನಿಯಾ ಗಾಂಧಿ ಕಳೆದ 19 ವರ್ಷಗಳಿಂದ ಕಾಂಗ್ರೇಸ್ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಸುಮಾರು 132 ವರ್ಷ ಹಳೆಯ ಪಕ್ಷದ ನೇತೃತ್ವ ವಹಿಸಿದವರ 15 ಜನರ ಪೈಕಿ ಆರು ಮಂದಿ ನೆಹರುವಂಶಕ್ಕೆ ಸೇರಿದವರು. ಡಿಸೆಂಬರ್ 16 ರಂದು ರಾಹುಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ನೆಹರು ವಂಶದ ಆರನೇ ಕಾಂಗ್ರೇಸ್ ಅಧ್ಯಕ್ಷರಾಗುತ್ತಾರೆ.


ಸ್ವಾತಂತ್ರ್ಯದ ನಂತರ 38 ವರ್ಷಗಳ ಕಾಲ ನೆಹರು ಕುಲದವರು ಪಕ್ಷದ ವ್ಯವಹಾರಗಳ ಮುಖ್ಯಸ್ಥರಾಗಿದ್ದರು. ಮೂರು ವರ್ಷಗಳ ಕಾಲ ನೆಹರು, ಎಂಟು ವರ್ಷಗಳ ಕಾಲ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ದಾಖಲೆಯ 19 ವರ್ಷಗಳ ಕಾಲ ಪಕ್ಷದ ನೇತೃತ್ವ ವಹಿಸಿದ್ದಾರೆ.


47 ವರ್ಷದ ರಾಹುಲ್ ಗಾಂಧಿಯವರು ತಮ್ಮ ಮುತ್ತಾತ ಮೊತಿಲಾಲ್ ನೆಹರೂ, ತಾತ ಜವಾಹರಲಾಲ್ ನೆಹರು, ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ಹೆಜ್ಜೆಗಳನ್ನು ಅನುಸರಿಸುತ್ತಾರೆ.


ಸ್ವಾತಂತ್ರ್ಯ ಮುಂಚಿತವಾಗಿಯೇ, ಅವರ ಮುತ್ತಾತ ಮೊತಿಲಾಲ್ ನೆಹರೂ ಅವರು ಪಕ್ಷಕ್ಕೆ ಮುಖ್ಯಸ್ಥರಾಗಿದ್ದರು. ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಅಬುಲ್ ಕಲಾಮ್ ಆಜಾದ್ ಮತ್ತು ಸರೋಜಿನಿ ನಾಯ್ಡು ಸೇರಿದಂತೆ ಮೊದಲಾದ ಮಹನೀಯರು ಈ ಹಿಂದೆ ಪಕ್ಷದ ನೇತೃತ್ವ ವಹಿಸಿದ್ದರು.