ಗುಜರಾತ್ ನಲ್ಲಿ ಮಹಿಳೆಯರಿಗೆ ಸುರಕ್ಷೆ ಎಲ್ಲಿದೆ? ಎಂದ ರಾಹುಲ್ ಗಾಂಧಿ
ನವದೆಹಲಿ: ರಾಹುಲ್ ಗಾಂಧಿ ಈಗ ತಮ್ಮ ಪ್ರಖರ ಮಾತುಗಳಿಂದ ಮತ್ತು ಪ್ರಶ್ನೆಗಳಿಂದ ಬಿಜೆಪಿಗೆ ತಲೆ ನೋವಾಗಿ ಕಾಡುತ್ತಿರುವ ಅವರು ಮೋದಿಯವರಿಗೆ ಗುಜರಾತನಲ್ಲಿನ 22 ವರ್ಷಗಳಲ್ಲಾದ ಬೆಳವಣಿಗೆಯ ಕುರಿತಾದ ಸರಣಿ ಪ್ರಶ್ನೆಗಳನ್ನು ಮುಂದುವರೆಸಿದ್ದಾರೆ.
ಅದರ ಭಾಗವಾಗಿ ತಮ್ಮ ಟ್ವಿಟ್ಟರ್ ಖಾತೆ @OfficeOfRG ಯಲ್ಲಿ ಗುಜರಾತ್ನಲ್ಲಿ ಮಹಿಳೆಯರಿಗೆ ಸುರಕ್ಷೆ ಎಲ್ಲಿದೆ? ಎಂದು ಪ್ರಶ್ನಿಸುತ್ತಾ ಬಿಜೆಪಿ ಸರ್ಕಾರವು ಗುಜರಾತನಲ್ಲಿ ಮಹಿಳೆಯರಿಗೆ ಭದ್ರತೆ,ಶಿಕ್ಷಣ,ಆಹಾರವನ್ನು ಒದಗಿಸಲು ವಿಫಲವಾಗಿದೆ ಎಂದರು.ಇದಕ್ಕೆ ಇಲ್ಲಿನ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಬಿಜೆಪಿ ಸರ್ಕಾರದಿಂದ ಭ್ರಮನಿರಸಗೊಂಡಿದ್ದಾರೆ ಎಂದು ಸರ್ಕಾರದ ಆಡಳಿತ ವೈಪಲ್ಯವನ್ನು ಟೀಕಿಸಿದರು.
ಗುಜರಾತಿನಲ್ಲಿ ಇದೆ ಡಿಸೆಂಬರ್ 9 ಮತ್ತು 14 ರಂದು ಎರಡು ಹಂತದ ಚುನಾವಣೆ ನಡೆಯಲಿದ್ದು,ಇದರ ಭಾಗವಾಗಿ ಕಳೆದ 22 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯವನ್ನು ದಿನವು ಪ್ರತಿ ವಿಷಯದ ಮೇಲೆ ಕೇಂದ್ರಿಕರಿಸಿ ಸರಣಿ ರೂಪದ ಪ್ರಶ್ನೆಗಳನ್ನು ಪ್ರಧಾನಿ ಮೋದಿಗೆ ಕೇಳುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ದೀಪೆಂದರ ಸಿಂಗ ಹೂಡಾ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿಯು ಈ 22 ವರ್ಷಗಳ ಆಡಳಿತದ ಕುರಿತಾಗಿರುವ ರಾಹುಲ್ ರವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.