ಪಣಜಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೋವಾದಲ್ಲಿ ಸೋನಿಯಾ ಗಾಂಧಿ ಅವರೊಂದಿಗೆ ಹೊಸ ವರ್ಷವನ್ನು ಆಚರಿಸಲಿದ್ದಾರೆ. ಶನಿವಾರ ಗೋವಾ ತಲುಪಿರುವ ರಾಹುಲ್. ಅಲ್ಲಿ ತಾಯಿ ಸೋನಿಯಾ ಹೊಸ ವರ್ಷವನ್ನು ಆಚರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ವರ್ಷವು ಸಹಿತ  ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗೋವಾದಲ್ಲಿ ಹೊಸ ವರ್ಷವನ್ನು ಆಚರಿಸಿದ್ದರು. ಕಳೆದ ಕೆಲವು  ವರ್ಷಗಳಿಂದ ಸೋನಿಯಾ ಅವರು ಇಲ್ಲಿನ  ರೆಸಾರ್ಟ್ಗೆ ಭೇಟಿ ನೀಡುತ್ತಿದ್ದಾರೆ.ಕಳೆದ ವರ್ಷ ದೆಹಲಿಯ ಮಾಲಿನ್ಯದ ಮಟ್ಟ ಕೆಟ್ಟದಾಗಿದ್ದರಿಂದ ಸೋನಿಯಾ ಅವರು ವೈದ್ಯರ ಸಲಹೆ ಮೇರೆಗೆ  ಗೋವಾಗೆ ಭೇಟಿ ನೀಡಿದ್ದರು.


ಸೋಶಿಯಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಚಿತ್ರಗಳಲ್ಲಿ, ರೆಸಾರ್ಟ್ನಲ್ಲಿ ಸೋನಿಯಾ ಅವರು ಅತಿಥಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ ಮತ್ತು ಅಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 16 ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಹುಲ್ ಗಾಂಧಿಯವರ ಮೊದಲ ರಜಾದಿನ ಇದು .