ನವದೆಹಲಿ:  ಇನ್ನು ಮುಂದೆ ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊ ರೈಲುಗಳಲ್ಲಿನ ಊಟ ಮತ್ತು ಉಪಹಾರದ ಬೆಲೆಯನ್ನು ಹೆಚ್ಚಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ, ಇದರ ಪರಿಣಾಮವಾಗಿ  ದರದಲ್ಲಿ ಹೆಚ್ಚಳವಾಗಿದೆ ಎಂದು ಸರ್ಕಾರದ ಆದೇಶದಲ್ಲಿ  ತಿಳಿಸಲಾಗಿದೆ.


COMMERCIAL BREAK
SCROLL TO CONTINUE READING

ರೈಲ್ವೆ ಮಂಡಳಿ ನೂತನ ಆದೇಶದ ಪ್ರಕಾರ, ಪ್ರಥಮ ದರ್ಜೆ ಎಸಿ ರೈಲಿನಲ್ಲಿ ಚಹಾಕ್ಕೆ 35 ರೂ, ಬೆಳಗಿನ ಉಪಾಹಾರ 140 ರೂ, ಊಟ ಮತ್ತು ಭೋಜನ 245 ರೂ.ಆಗಿದೆ. ಇನ್ನು ಎರಡನೇ ದರ್ಜೆಯ ಎಸಿ, ತೃತೀಯ ದರ್ಜೆಯ ಎಸಿ ಮತ್ತು ಕುರ್ಚಿ ಕಾರಿನಲ್ಲಿ, ಚಹಾಕ್ಕೆ 20 ವೆಚ್ಚ, ಬೆಳಗಿನ ಉಪಾಹಾರ 105, ಊಟ ಮತ್ತು ಭೋಜನ 185 ರೂ, ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ 


ಈಗ ಆಯಾ ಪ್ರಾದೇಶಿಕ ರುಚಿಯನ್ನು ಹೊಂದಿರುವ ಉಪಹಾರವನ್ನು ನೀಡಲು ನಿರ್ಧರಿಸಲಾಗಿದೆ ಎಂದು ರೇಲ್ವೆ ಮಂಡಳಿ ತನ್ನ ನೂತನ ಆದೇಶದಲ್ಲಿ ತಿಳಿಸಿದೆ.