ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರದಲ್ಲಿ 2002 ರಲ್ಲಿನ ಗೋದ್ರಾ ಘಟನೆಯನ್ನು ಮರು ಸೃಷ್ಟಿಸುವ ಸಲುವಾಗಿ ರೇಲ್ವೆ ಬೋಗಿಗೆ ಬೆಂಕಿ ಹಚ್ಚಲಾಗಿದೆ.


COMMERCIAL BREAK
SCROLL TO CONTINUE READING

ಈ ಪಶ್ಚಿಮ ರೇಲ್ವೆ ವಿಭಾಗಕ್ಕೆ ಸಂಬಂಧಿಸಿದ ಈ ರೈಲ್ವೆಗೆ "ಅಣುಕು ಡ್ರಿಲ್ ಬೋಗಿ"ಎಂದು ಕರೆದಿದೆ. ಇನ್ನೊಂದೆಡೆಗೆ ಸಾಕ್ಷ್ಯ ಚಿತ್ರ ನಿರ್ಮಾಣದ ತಂಡ ಇದನ್ನು ಶೂಟಿಂಗ್ ಮುಗಿದ ನಂತರ ಎಂದಿನ ಸ್ಥಿತಿಯಲ್ಲಿ ಮತ್ತೆ ವಾಪಸ್ ನೀಡಲಾಗುವುದು ಎಂದು ಹೇಳಿತ್ತು. ಇದಕ್ಕೆ ನಾವು ಶುಲ್ಕವನ್ನು ಪಡೆದಿದ್ದೇವೆ ಎಂದು ವಡೋದರಾ ರೇಲ್ವೆ ವಿಭಾಗದ ವಕ್ತಾರ ಖೆಮರಾಜ್ ಮೀನಾ ಹೇಳಿದ್ದಾರೆ.


ಗೋದ್ರಾ ರೈಲಿನ ದೃಶ್ಯವನ್ನು ಪ್ರತಾಪ್ ನಗರ ರೈಲ್ವೆ ನಿಲ್ದಾಣದಲ್ಲಿ ಚಿತ್ರಿಕರಿಸಲಾಗಿದೆ.ಇದಕ್ಕೆ ಸಂಬಂಧಿಸಿದ ಸೆಟ್ ನ್ನು ಕೋಚ್ ಕೇರ್ ಸೆಂಟರ್ ಹತ್ತಿರ ನಿರ್ಮಿಸಲಾಗಿದೆ ಎಂದು ಸಾಕ್ಷ್ಯ ಚಿತ್ರದ ನಿರ್ದೇಶಕ ಉಮೇಶ್ ಶುಕ್ಲಾ ಹೇಳಿದ್ದಾರೆ.ಈ ಸಾಕ್ಷ್ಯ ಚಿತ್ರದ ನಿರ್ಮಾಪಕರಿಗೆ ಶೂಟ್ ಮಾಡಲು ನಾಲ್ಕು ದಿನಗಳವರೆಗೆ  ಪ್ರತಾಪ್ ನಗರ್ ವಿಶ್ವಾ ಮಿತ್ರಿಯ ನ್ಯಾರೋ ನಿಲ್ದಾಣದಲ್ಲಿ ಅವಕಾಶ ನೀಡಲಾಗಿದೆ ಎಂದು ಮೀನಾ ಅವರು ತಿಳಿಸಿದ್ದಾರೆ.


ಫೆಬ್ರುವರಿ 27,2002 ರಲ್ಲಿನ ಗೋದ್ರಾ ರೈಲಿನ ಘಟನೆಯಲ್ಲಿ 59 ಕರ ಸೇವಕರು ಮೃತಪಟ್ಟಿದ್ದರು. ಇದರ ನಂತರ ಕೋಮುಗಲಭೆಯಲ್ಲಿ 1000ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.ಆಗ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.