ನವದೆಹಲಿ: ರೈಲು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡುವ, ವಿಚಾರಣೆ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಂದೇಶವೊಂದನ್ನು ನೀಡಿದೆ. ಇದೇ ನವೆಂಬರ್ 9 ರಂದು ರಾತ್ರಿ 11.45 ರಿಂದ 1.40ರವರೆಗೆ ರೈಲ್ವೆ ವೆಬ್ಸೈಟ್  irctc.co.in ಮತ್ತು ದೆಹಲಿ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಎರಡು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಈ ಅವಧಿಯಲ್ಲಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್, 139 ಗ್ರಾಹಕ ಸೇವೆ, ಟಿಕೆಟ್ ಕ್ಯಾನ್ಸಲಿಂಗ್ ಮೊದಲಾದ ಸೇವೆಗಳು ಲಭ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ, ಈ ಅವಧಿಯಲ್ಲಿ ಟಿಕೆಟ್ ರಿಸರ್ವೇಶನ್ ಮತ್ತು ಪ್ರಯಾಣದ ಟಿಕೆಟ್ ಗಳನ್ನೂ ನೀಡುವುದಿಲ್ಲ ಎನ್ನಲಾಗಿದೆ. 


ರೈಲ್ವೆ ಟಿಕೆಟ್ ಬುಕ್ಕಿಂಗ್ ಸೇವೆಯಲ್ಲಿ ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಆನ್ಲೈನ್ ನಲ್ಲಿ ಟ್ರಾಫಿಕ್ ಹೆಚ್ಚಾಗಿ ವೆಬ್ಸೈಟ್ ಹ್ಯಾಂಗ್ ಆಗುತ್ತಿತ್ತು. ಇದನ್ನು ಸರಿಪಡಿಸಲು ನಿರ್ವಹಣಾ ಕಾರ್ಯಗಳಿಗಾಗಿ ಈ ಎರಡು ಗಂಟೆಗಳ ಅವಧಿಯಲ್ಲಿ ರೇಲ್ವೆಯ ಎಲ್ಲಾ ಸೇವೆಗಳನ್ನೂ ರದ್ದುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.