ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ರೈಲ್ವೆ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಿದೆ. ಆದರೀಗ ಇನ್ನೂ ಒಂದು ಹಜ್ಜೆ ಮುಂದೆ ಸಾಗಿ ಶೀಘ್ರದಲ್ಲಿಯೇ ರೈಲುಗಳಲ್ಲಿಯೂ ವೈಫೈ ಸೇವೆ ಒದಗಿಸುವುದಾಗಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಭಾರತೀಯ ರೈಲುಗಳಲ್ಲಿ ವೈ-ಫೈ ಸೇವೆಯನ್ನು ಪ್ರಾರಂಭಿಸಲಾಗುವುದು. ಪ್ರಯಾಣಿಕರ ಅನುಕೂಲತೆಯ ಹೆಚ್ಚಳ ಮತ್ತು ಸಿಸಿಟಿವಿ ಕ್ಯಾಮೆರಾಗಳ ನೈಜ ಸಮಯದ ಮೇಲ್ವಿಚಾರಣೆಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ರೈಲುಗಳಲ್ಲಿಯೂ ವೈಫೈ ಅಳವಡಿಕೆಗೆ ಇಲಾಖೆ ಚಿಂತನೆ ನಡೆಸಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. 


ಪ್ರಸ್ತುತ, ದೇಶದ 5000ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಲಭ್ಯವಿದೆ. ಈಗ ರೈಲುಗಳಲ್ಲಿಯೂ ವೈಫೈ ಸೌಲ್ಭಿ ಒದಗಿಸುವುದರಿಂದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲೂ ಸಹಾಯವಾಗಲಿದೆ.