ನವದೆಹಲಿ: ಉತ್ತರ ರೈಲ್ವೆ ನೇಮಕಾತಿ ವಿಭಾಗ (RRC)ದ ಹೊಸದಿಲ್ಲಿಯ ಲಜಪತ್ ನಗರ ಸಂಸ್ಥೆಯಲ್ಲಿ 3093 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrcnr.org ಮೂಲಕ NR ಅಪ್ರೆಂಟಿಸ್ ನೇಮಕಾತಿ 2021ಹುದ್ದೆಗೆ ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2021ರ ಅಕ್ಟೋಬರ್ 20 ಆಗಿದೆ.  ರೈಲ್ವೆ ನೇಮಕಾತಿ ವಿಭಾಗ(Railway Recruitment Cell)ದ ಅಪ್ರೆಂಟಿಸ್ ಆಕ್ಟ್ 1961ರ ಅಡಿಯಲ್ಲಿ ನೇಮಕಾತಿ(Recruitment) ಪ್ರಕಟಣೆಯನ್ನು ಸೆಪ್ಟೆಂಬರ್ 14 ರಂದು ಹೊರಡಿಸಲಾಗಿದ್ದು, ವಿವಿಧ ವಿಭಾಗ /ಘಟಕಗಳು /ಕಾರ್ಯಾಗಾರಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.


ಆರ್‌ಆರ್‌ಸಿ ರೈಲ್ವೆ ನೇಮಕಾತಿ ಪ್ರಮುಖ ದಿನಾಂಕಗಳು


ಆನ್‌ಲೈನ್ ಅಪ್ಲಿಕೇಶನ್ ತೆರೆಯುವ ದಿನಾಂಕ ಮತ್ತು ಸಮಯ: ಸೆಪ್ಟೆಂಬರ್ 20


ಮೆರಿಟ್ ಲಿಸ್ಟ್ ಪ್ರಕಟಿಸುವ ನಿರೀಕ್ಷಿತ ದಿನಾಂಕ: ನವೆಂಬರ್ 09


ಇದನ್ನೂ ಓದಿ: ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿದೆ 'ನಕಲಿ ಕೊರೋನಾ ಲಸಿಕೆ ಪ್ರಮಾಣಪತ್ರದ' ದಂಧೆ!   


ನೇಮಕಾತಿಯ ವಯಸ್ಸಿನ ಮಿತಿ


ಅಭ್ಯರ್ಥಿಗಳು 15 ವರ್ಷ ಪೂರ್ಣಗೊಳಿಸಿರಬೇಕು ಮತ್ತು 20-10-2021ಕ್ಕೆ 24 ವರ್ಷ ಪೂರ್ಣಗೊಂಡಿರಬಾರದು. SC/ST ಅಭ್ಯರ್ಥಿಗಳಿಗೆ 5 ವರ್ಷಗಳು, OBC ಅಭ್ಯರ್ಥಿಗಳಿಗೆ 3 ವರ್ಷಗಳು ಗರಿಷ್ಠ ವಯೋಮಿತಿ ಸಡಿಲಿಕೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು 10 ವರ್ಷಗಳವರೆಗೆ ಸಡಿಲಿಸಲಾಗುತ್ತದೆ.


ನೇಮಕಾತಿಯ ಅರ್ಜಿ ಶುಲ್ಕ


ಅರ್ಜಿ ಶುಲ್ಕ 100 ರೂ. ಇರುತ್ತದೆ. ಅಭ್ಯರ್ಥಿಗಳು ಆನ್ಲೈನ್ ​​ಅಪ್ಲಿಕೇಶನ್ ಪ್ರಕ್ರಿಯೆಯ ಭಾಗವಾಗಿ ಆನ್ಲೈನ್ ​​ಮೋಡ್ ಮೂಲಕ ಶುಲ್ಕ ಪಾವತಿಸಬೇಕು. RRC ನಗದು/ಚೆಕ್/ಮನಿ ಆರ್ಡರ್/ಐಪಿಒ/ಡಿಮ್ಯಾಂಡ್ ಡ್ರಾಫ್ಟ್/ಸೆಂಟ್ರಲ್ ನೇಮಕಾತಿ ಶುಲ್ಕ ಸ್ಟ್ಯಾಂಪ್‌ಗಳಲ್ಲಿ ಅರ್ಜಿ ಶುಲ್ಕವನ್ನು ಸ್ವೀಕರಿಸುವುದಿಲ್ಲ. SC/ST/PwBD/ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ನೇಮಕಾತಿಯ ಅಗತ್ಯ ವಿದ್ಯಾರ್ಹತೆ


ಅಭ್ಯರ್ಥಿಯು SSC/ಮೆಟ್ರಿಕ್ಯುಲೇಷನ್/10ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ (10+2 ಪರೀಕ್ಷಾ ವ್ಯವಸ್ಥೆಯ ಅಡಿ) ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಮಂಡಳಿಯಿಂದ ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ NCVT/SCVTಯಿಂದ ನೀಡಲಾದ ಸಂಬಂಧಿತ ಟ್ರೇಡ್ ನಲ್ಲಿ ITI ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಅಧಿಸೂಚನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆಯಲ್ಲಿ ಪಾಸಾಗಿರಬೇಕು. ಅಧಿಸೂಚನೆಯ ದಿನಾಂಕದವರೆಗೆ SSC/ಮೆಟ್ರಿಕ್ಯುಲೇಷನ್/10ನೇ ಮತ್ತು ಐಟಿಐ ಫಲಿತಾಂಶಗಳಿಗಾಗಿ ಕಾಯುತ್ತಿರುವ ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ


ಇದನ್ನೂ ಓದಿ: Auto Debit Payments: ಡೆಬಿಟ್-ಕ್ರೆಡಿಟ್ ಕಾರ್ಡ್ ಪೇಮೆಂಟ್ ನಿಯಮ ಬದಲಿಸಿದ RBI; ಅಕ್ಟೋಬರ್ 1 ರಿಂ  


ನೇಮಕಾತಿಯ ಆಯ್ಕೆ ಪ್ರಕ್ರಿಯೆ


ಅಪ್ಲಿಕೇಶನ್‌ನ ಸ್ಕ್ರೀನಿಂಗ್ ಮತ್ತು ಪರಿಶೀಲನೆ ಮೂಲಕ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಮೆಟ್ರಿಕ್ಯುಲೇಷನ್/ SSC / 10th (ಕನಿಷ್ಠ ಶೇ.50ರಷ್ಟು ಅಂಕ)ಮತ್ತು ಐಟಿಐ ಪರೀಕ್ಷೆ ಎರಡರಲ್ಲೂ ಅಭ್ಯರ್ಥಿಯು ಪಡೆದ ಸರಾಸರಿ ಶೇಕಡಾವಾರು ಅಂಕಗಳನ್ನು ತೆಗೆದುಕೊಂಡು ಅರ್ಹತೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.  


ಆಸಕ್ತ ಅಭ್ಯರ್ಥಿಗಳು RRC NR ಅಪ್ರೆಂಟಿಸ್ ನೇಮಕಾತಿ 2021ಕ್ಕೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕೆಂದು ಸೂಚಿಸಲಾಗಿದೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.